ಕನ್ನಡ ವಿಕ್ಷನರಿಯಲ್ಲಿ ಪದಗಳ ಅರ್ಥವನ್ನು ಸುಲಭದಲ್ಲಿ ಹುಡುಕುವುದು ಹೇಗೆ?
ಕನ್ನಡ ವಿಕ್ಷನರಿಯಲ್ಲಿ ೨ ಲಕ್ಷಕ್ಕೂ ಹೆಚ್ಚು ಪದಗಳ ಅರ್ಥಗಳಿವೆ, ಅವುಗಳನ್ನು ಹುಡುಕುವಾಗ ಪ್ರತೀ ಸಲ ವಿಕ್ಷನರಿಯ URL ನೆನಪಿಟ್ಟುಕೊಂಡು ಅಥವಾ ಬುಕ್‍ಮಾರ್ಕ್ ಮಾಡಿದ ಪುಟವನ್ನು ಓಪನ್ ಮಾಡಿ ಅದರಲ್ಲಿ ನೀವು ಹುಡುಕಬೇಕಾದ್ದುದನ್ನು ಬರೆದು ಹುಡುಕುತ್ತಿದ್ದೀರಾದರೆ ಇಲ್ಲಿದೆ ಸುಲಭದ ಉಪಾಯ.
ಕ್ರೋಮ್ ಅಥವಾ ಕ್ರೋಮಿಯಮ್ ಬ್ರೌಸರ್ ಬಳಸುತ್ತಿದ್ದರೆ
ಸೆಟಿಂಗ್ಸ್ ಓಪನ್ ಮಾಡಿ. "Search" ವಿಭಾಗದಲ್ಲಿ "Manage Search Engines" ಅಂತ ಇರುತ್ತೆ ಅದನ್ನ ಕ್ಲಿಕ್ ಮಾಡಿ.
ಚಿತ್ರದಲ್ಲಿ ತೋರಿಸಿರುವಂತೆ ಕನ್ನಡ ವಿಕ್ಷನರಿಯನ್ನು ಸೇರಿಸಿ. ಸುಲಭದ ಕೀವರ್ಡ್ ಕೊಡಿ(ನಾನು knw ಎಂದು ಕೊಟ್ಟಿದ್ದೇನೆ), URL ನ ಜಾಗದಲ್ಲಿ http://kn.wiktionary.org/wiki/%s ಬರೆಯಿರಿ.
ಅಷ್ಟೇ ಮುಗೀತು. ಇನ್ಮುಂದೆ ಏನಾದ್ರು ಹುಡುಕಬೇಕನಿಸಿದ್ರೆ ಅಡ್ರೆಸ್ ಬಾರ್‍ನಲ್ಲಿ knw ಅಂತ ಬರೆದು ಸ್ಪೇಸ್ ಒತ್ತಿ. ಕೆಳಗಿನಂತೆ ಬದಲಾಗುತ್ತೆ. ನಂತರ ಅದರ ಮುಂದೆ ನೀವು ಹುಡುಕಬೇಕಾದುದನ್ನು ಬರೆದು ಎಂಟರ್ ಒತ್ತಿ.
ವಿಕ್ಷನರಿಯ ಆ ಪದದ ಪುಟ ತೆರೆದುಕೊಳ್ಳುತ್ತೆ.
ಫೈರ್‍ಫಾಕ್ಸ್ ಬ್ರೌಸರ್ ಬಳಸುತ್ತಿದ್ದರೆ
ಸೆಟಿಂಗ್ಸ್ ರಗಳೆ ಬೇಡ ಅಂತ ಪ್ಲಗಿನ್ ಮಾಡಿದ್ದೇನೆ. ಈ ಲಿಂಕ್ನಿಂದ ಪ್ಲಗಿನ್ ಅನ್ನು ಇನ್‍ಸ್ಟಾಲ್ ಮಾಡಿಕೊಳ್ಳಿ. ನಂತರ ಕೆಳಗಿನ ಚಿತ್ರದಂತೆ ಬಲಗಡೆಯ ಹುಡುಕಾಟ ಮಾಡುವ ಇಂಜಿನ್ ಗಳ ಪಟ್ಟಿಯ ಜೊತೆ ಕನ್ನಡ ವಿಕ್ಷನರಿಯೂ ಕಾಣುತ್ತೆ.
ಹುಡುಕಾಟ ಮಾಡಲು ಅದನ್ನು ಆಯ್ಕೆ ಮಾಡಿ, ನಂತರ ನೀವು ಹುಡುಕಬೇಕಾಗಿದ್ದುದನ್ನ ಬರೆದು ಎಂಟರ್ ಒತ್ತಿ.
ಅಷ್ಟೆ ಹುಡುಕಾಟದ ಉತ್ತರಪುಟ ತೆರೆದುಕೊಳ್ಳುತ್ತದೆ.
About Aravinda VK
Partner at Kadalu Investments, Creator of Sanka, Creator of Chitra, GlusterFS core team member, Maintainer of Kadalu Storage