ARAVINDA VISHWANATHAPURA

ವೆಬ್‌ಸೈಟ್‌ಗೆ ಹೊಸ ರೂಪ

Nov 1, 2011
1 minute read.
ಕೆಲಸ ಸಮಯ ಹೊಸತು kannadablog
ದಾರಿ

ಏನನ್ನೂ ಬರೆಯದೆ ಬಹಳ ದಿನಗಳಾಯಿತು(code ಬಿಟ್ಟು ;)) ವೆಬ್ ಟೆಕ್ನಾಲಜಿಯಲ್ಲಿ ಇರುವ ಆಸಕ್ತಿಯ ಬಗೆಗೇ ಕೋಪ ಬಂದಿತು. Wordpress, Drupal, Tumbler, Blogspot ಯಾವುದೂ ನನ್ನ ವೆಬ್‌ಸೈಟ್‌ಗೆ ಬೇಕಾದಂತೆ ಇಲ್ಲ ಅಂತ ಅನ್ನಿಸುತ್ತಿತ್ತು. ನನ್ನ ವೆಬ್‌ಸೈಟ್‌ ಮಾಡಲು ಬೇಕಾದುದನ್ನು ನಾನೇ ಬರೆಯುತ್ತೇನೆಂದು ಕುಳಿತೆ. ಬಹಳಷ್ಟು ಗೆಳೆಯರು ನನ್ನ weekend plan ಕೇಳಿದಾಗ ನನ್ನ ವೆಬ್‌ಸೈಟ್‌ ಕೆಲಸ ಸಲ್ಪ ಇದೆ ಕಣ್ರೋ ಅಂತ ಹೇಳ್ತಿದ್ದೆ. ಇವನಿಗೆ ಮಾಡಕ್ಕೆ ಬೇರೆ ಕೆಲಸನೇ ಇಲ್ವಾ ಅಂತನೂ ಅಂದುಕೊಂಡಿರಬಹುದು. ಇನ್ನೂ ಕೆಲವರು ನನ್ನ ವೆಬ್‌ಸೈಟ್‌ code rewrite ಮಾಡಿದಷ್ಟು ಸಲ ಬ್ಲಾಗ್ ಬರೆದಿಲ್ಲ ಅಂತಾರೆ :)

ಆದರೂ ಹೊಸ ತಂತ್ರಜ್ಞಾನಗಳನ್ನು ಕಲಿತ ಖುಷಿ ಇದೆ. ಈಗಿರುವ ನನ್ನ ವೆಬ್‌ಸೈಟ್‌ ೭ನೇ ಆವೃತ್ತಿ, NodeJS ಮತ್ತು CouchDb ಬಳಸಿ ಮಾಡಿದ ವೆಬ್‌ಸೈಟ್‌. ನನ್ನ ಇನ್ನೊಂದು ವೆಬ್‌ಸೈಟ್‌(hosabelaku.aravindavk.in)ನಲ್ಲಿದ್ದ ಬ್ಲಾಗ್ ಗಳನ್ನೂ, Google Buzz ನಲ್ಲಿ ಬರೆದಿದ್ದನ್ನೂ ಹಾಗೂ ಸಂಪದದಲ್ಲಿ ನಾನು ಬರೆದಿದ್ದ ಬ್ಲಾಗ್ ಗಳನ್ನೂ ಇಲ್ಲಿಗೆ migrate ಮಾಡಿದ್ದೇನೆ. Google Buzz ನಿಂದ comments ಗಳನ್ನು ತರುವ ಕೆಲಸ ಇನ್ನೂ ಬಾಕಿ ಇದೆ.

ಈ ವೆಬ್‌ಸೈಟ್‌ ನೋಡಿ ನಿಮಗೇನ್ನನ್ನಿಸಿತು ತಿಳಿಸಿ.

About Aravinda Vishwanathapura

Co-Founder & CTO at Kadalu Technologies, Creator of Sanka, Creator of Chitra, GlusterFS core team member, Maintainer of Kadalu Storage
Contact: Linkedin | Twitter | Facebook | Github | mail@aravindavk.in