ವಿಚಿತ್ರ ಕನಸು

ನಿನ್ನೆ ರಾತ್ರಿ ಬ್ಲಾಗ್ ಬರೀತಾ ಕೂತು ರಾತ್ರಿ ೨ ಗಂಟೆ ಆಗಿತ್ತು, ಮತ್ತೆ ೭:೩೦ ಗೆ ಅಲಾರ್ಮ್ ಇಟ್ಟು ಮಲ್ಕೊಂಡಿದ್ದೆ, ಬೆಳಗ್ಗೆ ವಿಚಿತ್ರ ಕನಸೊಂದು ಬಿದ್ದು ೬:೩೦ ಗೆ ಎಚ್ಚರಾಯ್ತು..

ಆ ಕನಸು ಒಂತರಾ ಮಜಾ ಇತ್ತು, ಅದನ್ನ ಊಹಿಸಿಕೊಳ್ಳಲಿಕ್ಕೆ ಸುಲಭವಾಗ್ಲಿ ಅಂತ ಒಂದು ಚಿತ್ರ ಬರೆದಿದೀನಿ. :)

ನಾನು ಎಲ್ಲೋ ಹೋಗ್ತಾ ಇರ್ತೀನಿ, ಆಗೊಂದು ನಾಯಿಮರಿ ಬರುತ್ತೆ ಅದು ನನ್ನ ಎಡಕೈಗೆ ಬಾಯಿ ಹಾಕಿ ಬಿಡುತ್ತೆ, ಏನು ಮಾಡಿದ್ರೂ ಬಿಡಲ್ಲ, ನಾನು ಸುಮಾರು ಸಲ ಕೊಡುಕಿದ್ರೂ ಅದು ಬೀಳಲಿಲ್ಲ.. ಇನ್ನೇನೂ ಬೇರೆ ದಾರಿ ಕಾಣದೆ ಹಂಗೇ ಅದನ್ನ ಎಳ್ಕೊಂಡು ಹೋಗ್ತಾ ಇರ್ತೀನಿ.

ವಿಚಿತ್ರ ಕನಸು

ಅಷ್ಟರಲ್ಲಿ ಎಚ್ಚರಾಯ್ತು.

Comments !