ವಸುದೇಂದ್ರ ರ ಕಥೆಗಳ ಪ್ರಭಾವ
ಒಂದಿವ್ಸಾ ನನ್ನ ಸ್ನೇಹಿತನೊಬ್ಬ "ರಿಸೆಷನ್ ಬಂತು" ಅಂತ ಒಂದು ಕಥೆಯ pdf ಕಳಿಸಿದ್ದ. ಸುಮಾರು ದೊಡ್ಡ ಇದೆ ಆಮೇಲೆ ಓದಣಾ ಅಂತ ಅಂದ್ಕೊಂಡು ಹಾಗೇ ಬಿಟ್ಟಿದ್ದೆ, ಅವ್ನು ನಂಗೆ ಸಿಕ್ಕಿದಾಗೆಲ್ಲ ಕೇಳ್ತಿದ್ದ ಓದಿದ್ಯಾ? ಓದಿದ್ಯಾ? ಅಂತ. ಅರೆ ಇವ್ನೇನಪ್ಪ ಅಂದ್ಕೊಂಡು ಓದೇ ಬಿಡೋಣ ಅಂತ ಕುಳಿತೆ ಓದಕ್ಕೆ… ಅಬ್ಬಾ… ಎಷ್ಟು ನಕ್ಕಿದೀನಿ ಅಂದ್ರೆ,.. ನೆನೆಸ್ಕೊಂಡ್ರೆ ಈಗ್ಲೂ ನಗ್ಬೋದು… ಆಮೇಲೆ ಫ್ರೆಂಡ್ ಗೆ ನಗ್ತಾನೇ ಫೋನ್ ಮಾಡಿ ಓದಿ ಆಯ್ತು ಅಂತ ಹೇಳಿದೆ. ಅಮೇಲೆ ನಂಗಂತೂ ಸುಮ್ನಿರಕ್ಕೇ ಆಗ್ಲಿಲ್ಲ… ಯಾರಿಗಾದ್ರು ಕಳಿಸ್ಲೇ ಬೇಕು ಅನ್ನಿಸ್ತು… ಯಾರು ಆನ್ಲೈನ್ ಇದಾರೆ ಅಂತ ನೋಡಿದೆ, ಇದ್ದ ಕೆಲವು ಫ್ರೆಂಡ್ಸ್ ಗೆಲ್ಲಾ ಕಳಿಸಿದೆ.. ಆದ್ರೂ ಸಮಾಧಾನ ಆಗ್ಲಿಲ್ಲ, ಓದಿದ್ರಾ ಹೆಂಗಿದೆ ಅಂತ ಫಾಲೋಅಪ್ ಕೂಡ ಮಾಡ್ತಿದ್ದೆ.
ಇದುವರೆಗೆ ವಸುದೇಂದ್ರ ಏನು ಬರ್ದಿದಾರೆ? ಎಲ್ಲಾ ಹಿಂಗೆ ಬರೀತಾರ ಅನ್ನಿಸಕ್ಕೆ ಶುರು ಆಯ್ತು… ಸಪ್ನ ಬುಕ್ ಹೌಸ್ ಗೆ ಹೋದೆ, ಅವ್ರಿಗೆ ಗೊತ್ತಿರುತ್ತೋ ಇಲ್ವೋ ಅಂದ್ಕೊಂಡು "ವಸುದೇಂದ್ರ ಅಂತ ಒಬ್ರು ಬರೀತಾರಲ್ಲ " ಅಂದೆ, ಹೋ.. ಅದಾ ಎಲ್ಲಾ ಇಲ್ಲಿದೆ ಬನ್ನಿ ಅಂತ ಎಲ್ಲಾ ಬುಕ್ ಇರೋ ಅಲ್ಲಿ ಕರ್ಕೊಂಡು ಹೋಗಿ ಬಿಟ್ಟ. ಅದ್ರಲ್ಲೂ ಕೆಲವು ಬುಕ್ಕು ಗಳ ಇಂಟ್ರೋ ನೂ ಕೊಟ್ಟ. ಸರಿ ಅಂತ ಅವನನ್ನ ನಂಬಿ ಎರಡು ಪುಸ್ತಕ ತಂದೆ. ಆಮೇಲೆ ರೂಮಲ್ಲಿ ಒಬ್ಬನೇ ಕೂತು ನಗುತ್ತಿದ್ದುದು ಎಲ್ಲಾರ್ಗೂ ಕೇಳಿಸ್ತಿತ್ತೇನೋ… ಊರಿಂದ ಅಮ್ಮ ಫೋನ್ ಮಾಡಿದಾಗ ಅವ್ಳಿಗೂ ಸಲ್ಪ ಸಲ್ಪ ಕತೆ ಹೇಳಿ, ಊರಿಗೆ ಬರುವಾಗ ತಗೊಂಬರ್ತೀನಿ ಓದುವಿಯಂತೆ ಅಂತ ಹೇಳ್ತನೇ ಸುಮಾರು ಕತೆ ಹೇಳಿ ಮುಗಿಸಿದ್ದೆ. ಮತ್ತೊಂದು ಶನಿವಾರ ಮತ್ತೆ ಸಪ್ನ ಬುಕ್ ಹೌಸ್ ಗೆ ಹೋದಾಗ ಮತ್ತೆರಡು ಪುಸ್ತಕ :)
ಇಷ್ಟಕ್ಕೇ ಮುಗೀತು ಅಂದ್ಕೊಂಡ್ರಾ? ಆಫೀಸಲ್ಲಿ ದಿನಾಲು ಕಾಫಿಗೆ ರಾಘವ ಸಿಕ್ತಿದ್ದ… ಅವ್ನಿಗೂ ಒಂದೆರಡು ಕತೆ ಹೇಳಿದ್ದಾಯ್ತು.. ಮದ್ಯಾನ ಊಟಕ್ಕೆ ಹೋಗುವಾಗ ಪವನ್ ಗೂ ಸಲ್ಪ ಬುಕ್ ಬಗ್ಗೆ ಹೇಳಿದೆ. ಬೇರೆ ಏನೋ ಮಾತಾಡ್ತಿದ್ದಾಗ್ಲೂ ವಸುದೇಂದ್ರ ಇದ್ರು ಬಗ್ಗೆನೂ ಬರ್ದಿದಾರೆ ಕಣೋ ಅಂತ ಶುರು ಮಾಡ್ಕೊಂಡೆ.. ಏನು ಅಂದ್ಕೊಂಡ್ರೇನೋಪ್ಪಾ… ;)
ನೀವೇ ಹೇಳಿ ಈಗೇನ್ ಮಾಡ್ಲಿ ನಾನು? ಓದೋದು ನಿಲ್ಲಿಸ್ಲಾ ಅಥವಾ ನೀವೆಲ್ಲಾ ಫೋನಲ್ಲಿ ಅಥ್ವಾ ಎಲ್ಲಾರು ಸಿಕ್ಕಾಗ ಕತೆ ಕೇಳಕ್ಕೆ ರೆಡಿ ಇದೀರಾ?
ರಾಘವ, ಪವನ್ ಇನ್ನು ಮುಂದೆನೂ ಕಾಫಿಗೆ /ಊಟಕ್ಕೆ ಸಿಕ್ತೀರಲ್ವಾ? ;)
About Aravinda Vishwanathapura
Co-Founder & CTO at Kadalu Technologies, Creator of Sanka, Creator of Chitra, GlusterFS core team member, Maintainer of Kadalu Storage