"ವರ್ಣಮಯ" ಮುಖಪುಟ ಸ್ಪರ್ಧೆ

ವಸುದೇಂದ್ರ ಅವರ ಹೊಸ ಪುಸ್ತಕ "ವರ್ಣಮಯ" ದ ಮುಖಪುಟ ವಿನ್ಯಾಸದ ಸ್ಪರ್ಧೆ ಇತ್ತು(ನೋಡಿರ್ಲಿಲ್ಲ ಅಂದ್ರೆ ಇಲ್ಲಿ ನೋಡಿ). ಶ್ವೇತ ಅವರಿಗೆ ಬಹುಮಾನವೂ ಬಂತು (ವಿವರಗಳು ಇಲ್ಲಿವೆ).

ಈ ಬಾರಿ ನಾನೂ ಒಂದಷ್ಟು ಮುಖಪುಟ ವಿನ್ಯಾಸಗಳನ್ನ ಮಾಡಿ ಕಳುಹಿಸಿದ್ದೆ, ಛಂದ ಸ್ಪರ್ಧೆಯಲ್ಲಿ ಭಾಗವಹಿಸುವುದೇ ಒಂದು ಖುಷಿ. ಇದೇ ಮೊದಲನೇ ಬಾರಿಗೆ ಮುಖಪುಟ ವಿನ್ಯಾಸ ಮಾಡಿದ್ದು. ಗಿಂಪ್ ತಂತ್ರಾಂಶ ಹಾಗೂ ನನ್ನ ಫೋಟೋಗಳನ್ನ ಬಳಸಿ ಡಿಸೈನ್ ಮಾಡಿದ್ದು.

ವಸುಧೇಂದ್ರ ಅವರು ಫೇಸ್‍ಬುಕ್ ಅಲ್ಲಿ ಮೊದಲನೇ ಸೆಟ್ ಫೋಟೋಗಳನ್ನು ಹಾಕಿದಾಗ, ಬ್ರೌಸರ್‍ನಲ್ಲಿ ಚುಕ್ಕುಬುಕ್ಕುವಿನ ಪುಟ ಬುಕ್ ಮಾರ್ಕ್ ಮಾಡಿಟ್ಟದ್ದು ನೆನಪಾಗಿ ಪ್ರಯೋಗ ಆರಂಭಿಸಿದೆ. ವಸುಧೇಂದ್ರ ಅವ್ರು ಏನು ಬರೆದಿರ್ಬೋದು ಹಾಸ್ಯನಾ ಅಥವಾ ಸೀರಿಯಸ್ಸಾ.. ವರ್ಣ ಅಂದ್ರೆ ವರ್ಣನೇನಾ ಅಥವಾ ಬೇರೆ ಏನಾದ್ರೂ ಅರ್ಥ ಇರ್ಬೋದಾ ಅಂತೆಲ್ಲಾ ಯೋಚ್ನೆ ಮಾಡುತ್ತಾ ನಾನು ತೆಗೆದ ಫೋಟೋಗಳಲ್ಲಿ ಒಂದಷ್ಟು ಫೋಟೋಗಳನ್ನ ಆಯ್ಕೆ ಮಾಡಿದ್ದಾಯ್ತು. ಆ ಫೋಟೋಗಳನ್ನೇ ಉಪಯೋಗಿಸಿ ಒಂದಷ್ಟು ಮುಖಪುಟ ವಿನ್ಯಾಸ ಮಾಡಿದ್ದೂ ಆಯ್ತು.

ನಾನು ಕಳುಹಿಸಿದ ಮುಖಪುಟಗಳು ಇಲ್ಲಿವೆ, ಅಷ್ಟೇನೂ ಚೆನ್ನಾಗಿಲ್ಲ, ಆದರೆ ಒಂದು ಪ್ರಯತ್ನ ಅಷ್ಟೆ. ಎಲ್ಲಾ ಡಿಸೈನ್‍ಗಳಲ್ಲೂ ಫಾಂಟ್ ಗಳ ಕೊರತೆ ಎದ್ದು ಕಾಣ್ತಿದೆ.

ಮುಖಪುಟ ವಿನ್ಯಾಸಗಳು

ಅಂದ ಹಾಗೆ ಇದೇ ತಿಂಗಳು ೧೬ ಕ್ಕೆ ವಸುಧೇಂದ್ರ ಅವ್ರ ಹೊಸ ಬುಕ್ಕು "ವರ್ಣಮಯ" ಬಿಡುಗಡೆ. ಬರ್ತೀರಲ್ವಾ? (ಕಾರ್ಯಕ್ರಮದ ವಿವರಗಳು ಇನ್ನೂ ಗೊತ್ತಿಲ್ಲ, ಚುಕ್ಕುಬುಕ್ಕು ನೋಡ್ತಾ ಇದ್ರೆ ನಿಮ್ಗೇ ಗೊತ್ತಾಗುತ್ತೆ.)

UPDATE:

ಕಾರ್ಯಕ್ರಮದ ವಿವರಗಳು ಇಂತಿವೆ. ಎಲ್ಲ ಬನ್ನಿ.

ಛಂದ ಇನ್ವೈಟ್

Comments !