ತುತ್ತೂ ಟಾಟ
Oct 9, 2023
1 minute read.
impana
amogha
kannada
ಅಕ್ಕ ಕನ್ನಡ ಪದ್ಯ ಕಲಿಯುತ್ತಿದ್ದಳು, ಜೋರಾಗಿ ಓದಿಕೊಂಡು.
"ಕೂಸು ಇದ್ದಾ ಮನೆಗೆ…"
ಅಮೋಘ ಬಂದು ಅಕ್ಕನ ಹತ್ತಿರ ಹೇಳಿದ..
"ಅಕ್ಕಾ.. ತುತ್ತೂ ಟಾಟ!"
ನಮಗ್ಯಾರಿಗೂ ಅರ್ಥ ಆಗಿಲ್ಲ. ಆಮೇಲೆ ಅಕ್ಕ ಹೇಳಿದ್ಳು..
"ಬಣ್ಣದ ತಗಡಿನ.."
ಅಮೋಘ ಹೇಳಿದ "ತುತ್ತೂ"
ನಮಗೆಲ್ಲಾ ಆಗ ಅರ್ಥ ಆಯಿತು. ಮುಂಚೆ ಅಭ್ಯಾಸ ಮಾಡುತ್ತಿದ್ದ "ಬಣ್ಣದ ತಗಡಿನ ತುತ್ತೂರಿ" ಪದ್ಯ ನೆನಪಿಟ್ಟುಕೊಂಡಿದ್ದಾನೆ ಅಂತ.
ಇಂಪನ: 8 ವರ್ಷ, ಅಮೋಘ: 2 ವರ್ಷ
About Aravinda Vishwanathapura
Co-Founder & CTO at Kadalu Technologies, Creator of Sanka, Creator of Chitra, GlusterFS core team member, Maintainer of Kadalu Storage