ಟ್ರಾಫಿಕ್ ಸಿಗ್ನಲ್
ಬಹಳಷ್ಟು ಸಲ ನೋಡಿದಂತೆ ಟ್ರಾಫಿಕ್ ಸಿಗ್ನಲ್ ಗ್ರೀನ್ ಆದ್ರೂ ಜನ ಹೊರಡೋದ್ರೊಳಗೆ ಮತ್ತೆ ರೆಡ್ ಬಂದಿರುತ್ತೆ. ಗ್ರೀನ್ ಇದ್ದಾಗಿನ ಅರ್ದದಷ್ಟು ಸಮಯ ಮುಂದಿದ್ದವರು ಹೊರಡುವುದರಲ್ಲೇ ಕಳೆಯುತ್ತೆ, ಮತ್ತೊಷ್ಟೊತ್ತಿಗೆ ರೆಡ್ ಬಂದು ಇನ್ನೊಂದು ರೌಂಡ್ ಕಾಯ್ಬೇಕು.
ಸಿಗ್ನಲ್ ಅಲ್ಲಿ ನಿಂತಾಗ ಬಹಳಷ್ಟು ಯೋಚನೆ ಮಾಡಿದ್ದೀನಿ ಯಾಕೆ ಹೀಗೆ ಅಂತ, ಆಗ ಹೊಳೆದವುಗಳನ್ನೆಲ್ಲಾ ಬರೀಬೇಕು ಅನ್ನಿಸ್ತು. ಬಹಳಷ್ಟು ಪಾಯಿಂಟ್ ಗಳನ್ನು ನೋಡಿದಾಗ ಸಿಗ್ನಲ್ ಗಳಲ್ಲಿ ಕಾಯುವ ಸಮಯ ಕಡಿಮೆ ಮಾಡಲು ನಮ್ಮಿಂದಲೇ ಸಾಧ್ಯ!
ಕೆಲವು ತಪ್ಪಿಸಲು ಆಗದ ಕಾರಣಗಳನ್ನು ಬಿಟ್ಟಿದ್ದೇನೆ, ಉದಾಹರಣೆಗೆ ಗಾಡಿ ಸ್ಟಾರ್ಟ್ ಆಗದೇ ಇರೋದು, ಪೆಟ್ರೋಲ್ ಖಾಲಿಯಾಗೋದು.. ಇತ್ಯಾದಿ.
-
ಸಿಗ್ನಲ್ ಅಲ್ಲಿ countdown ಹಾಕೇ ಇಲ್ಲ, ಹಾಗಾಗಿ ಸಿಗ್ನಲ್ ಗ್ರೀನ್ ಆಗೋದೇ ಗೊತ್ತಾಗಲ್ಲ. ಆಮೇಲೆ ಹೊರಡೋದು ತಡ ಆಗುತ್ತೆ.
-
ಒಂದು ಸಿಗ್ನಲ್ ಅಲ್ಲಿ clockwise ಬಿಡುತ್ತಾ ಹೋಗುತ್ತಾರೆ, ಇನ್ನೊಂದು ಕಡೆ ಇನ್ನೊಂತರ. ಹಾಗಾಗಿ ಯಾವ ಸಿಗ್ನಲ್ ಯಾವ ತರ ಅಂತ ನೆನಪಿಟ್ಟುಕೊಳ್ಳೋದು ಕಷ್ಟ.
-
ನಾವು ಹೆಂಗಿದ್ರೂ ಮುಂದಿದೀವಿ, ಈ ಸಲ ಸಿಗ್ನಲ್ ಬಿಟ್ಟಾಗ ಹೇಗಿದ್ರೂ ನಾವು ಹೋಗಬಹುದು. ಆರಾಮಾಗಿ ಹೊರಡೋಣ.
-
ಮುಂಚೆನೇ ಯಾಕೆ ಗಾಡಿ ಸ್ಟಾರ್ಟ್ ಮಾಡ್ಲಿ, ಹಿಂದಿನಿಂದ ಎಲ್ಲಾ ಹಾರ್ನ್ ಮಾಡ್ತಾರಲ್ಲ ಆಮೇಲೆ ಹೊರಟ್ರಾಯ್ತು.
-
ಎದ್ರುಗಡೆ ಇಂದ ಬರೋ ವಾಹನಗಳನ್ನೇ ನೋಡ್ತಾ ಇದ್ದೆ, ಅವರದ್ದಾದ್ಮೇಲೆ ನಮ್ಮನ್ನು ಬಿಡ್ತಾರೆ ಅಂತ ಸಿಗ್ನಲ್ ನೋಡೋದೇ ಮರ್ತೋಗಿತ್ತು.
-
ಬಲಕ್ಕೆ ಹೋಗೋರು, ಎಡಗಡೆ ಗಾಡಿ ನಿಲ್ಲಿಸಿಕೊಂಡಿರ್ತಾರೆ. ಸಿಗ್ನಲ್ ಬಿಟ್ಟಾಗ ಅವರು ಅಡ್ಡ ಬಂದು ಎಲ್ಲಾರಿಗೂ ತೊಂದರೆ ಕೊಡ್ತಾರೆ.
-
ಸಿಗ್ನಲ್ ಅದೆಷ್ಟು ಹೊತ್ತು ಇರುತ್ತೆ ಅಂದ್ರೆ ಸಿಗ್ನಲ್ ಅಲ್ಲಿ ನಿಂತಿದ್ದೀನಿ ಅಂತನೇ ಮರ್ತೋಗಿರುತ್ತೆ. ಆಮೇಲೆ ಎಲ್ಲಾ ಹಾರ್ನ್ ಮಾಡಿದ್ಮೇಲೇ ಎಚ್ಚರ ಆಗೋದು.
-
ಪಕ್ಕದ ಲೇನ್ ನಲ್ಲಿ ಚೆಂದದ ಹುಡ್ಗಿ ಇದ್ಳಲ್ಲ ಅವಳನ್ನ ನೋಡ್ತಾ ಇದ್ದೆ, ಸಿಗ್ನಲ್ ಗ್ರೀನ್ ಆಗಿದ್ದೇ ಗೊತ್ತಾಗಿಲ್ಲ :)
ನಿಮಗೂ ಯಾವ್ದಾದ್ರೂ ಅನ್ನಿಸಿದ್ರೆ ಹೇಳಿ.
About Aravinda Vishwanathapura
Co-Founder & CTO at Kadalu Technologies, Creator of Sanka, Creator of Chitra, GlusterFS core team member, Maintainer of Kadalu Storage