ತಪ್ಪಿದ ಛಾನ್ಸು

ಆ ಹೋಟೆಲಿನ ಎದುರಿಗೆ ಒಬ್ಬರು ಅಜ್ಜ ರೋಡಿನಲ್ಲಿ ಆಚೆ ಈಚೆ ನೋಡ್ತಾ ಇದ್ರು.. ಹೋ mostly ರಸ್ತೆ ದಾಟಕ್ಕೆ ಕಷ್ಟ ಪಡ್ತಿದಾರೇನೋ ಅನ್ನಿಸ್ತು.

ನಂಗೊಂದು ಒಳ್ಳೆ ಕೆಲ್ಸ ಮಾಡಕ್ಕೆ ಛಾನ್ಸ್ ಸಿಕ್ತಲ್ಲಾ ಅಂತ ಅವರ ಹತ್ತಿರಕ್ಕೆ ಹೋದೆ, ಸ್ಕೂಲ್ ಅಲ್ಲಿ ಇದ್ದಾಗ ದಿನಕ್ಕೊಂದು ಒಳ್ಳೆಕೆಲ್ಸ ಅಂತ ಬರೆಯೋಕೆ ಹೇಳ್ತಿದ್ದಿದ್ದು ನೆನಪಾಗ್ತಿತ್ತು ..

ಆ ಅಜ್ಜನ ಹತ್ತಿರ ಹೋಗಿ ಕೇಳಿದೆ, ರೋಡ್ ದಾಟಕ್ಕೆ ಸಹಾಯ ಮಾಡ್ಲಾ? ಅಂತ.

ನನ್ನನ್ನೊಮ್ಮೆ ಮೇಲಿಂದ ಕೆಳಗಿನವರೆಗೆ ನೋಡಿದ್ರು... ಆಮೇಲೆ... "ಇಲ್ಲಪ್ಪಾ ನನ್ನ ಮಗ ಕಾರ್ ಪಾರ್ಕ್ ಮಾಡಿದ್ದು ತರಕ್ಕೆ ಹೋಗಿದಾನೆ, ಇಲ್ಲೇ ಬರ್ತೀನಿ ಅಂದ ಅಂತ ಕಾಯ್ತಿದೀನಿ" ಅಂದ್ರು.

Comments !