ಸ್ವಾರ್ಥಸಾಧಕರು

ಇವತ್ತು ಹುಷಾರಿಲ್ಲ ಅಂತ ಡಾಕ್ಟರ್ ಹತ್ರ ಹೋಗಿದ್ದೆ, ನನಗಿಂತ ಮೊದಲೇ ಬಂದವರು ಒಬ್ಬರಿದ್ದರು ಹಾಗೇ ಕಾಯುತ್ತಾ ಕುಳಿತಿದ್ದೆ.

ಆಗ ಸಲ್ಪ ವಯಸ್ಸಾದ ಲೇಡಿ ಮತ್ತೆ ಅವರ ಮಗ ಅನ್ನಿಸುತ್ತೆ ಅಲ್ಲಿಗೆ ಬಂದರು. ಸಲ್ಪ ಗ್ರಾಂಡ್ ಆಗೇ ಡ್ರೆಸ್ ಮಾಡ್ಕೊಂಡಿದ್ರು, ಎಲ್ಲೋ ಮದುವೆ ಅಥವಾ ರಿಸೆಪ್ಷನ್ ಗೆ ಹೋಗುವವರಿರಬೇಕು ಅನ್ನಿಸ್ತಿತ್ತು..

ನನ್ನ ನಂತರ ಮತ್ಯಾರೂ ಇರ್ಲಿಲ್ಲ, ಸೋ ಇಬ್ಬರ ಚೆಕ್ ಅಪ್ ಮುಗಿಯೋ ತನಕ ಅವರು ಕಾಯಬೇಕಿತ್ತು ಅಷ್ಟೆ. ಅವರು ನನ್ನತ್ರ ಹೇಳಿದ್ರು.. ನಮ್ಮ ಅಮ್ಮನಿಗೆ ಬಿಪಿ ತುಂಬಾ ಜಾಸ್ತಿ ಇದೆ ಬೇಗ ತೋರಿಸಿಕೊಂಡು ಹೋಗ್ಬಿಡ್ತೀವಿ.

ಅವರನ್ನು ನೋಡಿದೆ ನಿಜ ಹೇಳ್ತಿದಾರೋ ಸುಳ್ಳು ಹೇಳ್ತಿದಾರೋ ಗೊತ್ತಾಗ್ಲಿಲ್ಲ.. ನಾನು ಹೇಳಿದೆ, ನನಗೆ ಜ್ವರ ಸುಡುತ್ತಾ ಇದೆ, ನಾನು ಕಾಯುತ್ತನೂ ಸಲ್ಪ ಹೊತ್ತಾಯಿತು ಅಂದೆ.

ಅವರು ಅಲ್ಲೇ ಕಾಯುತ್ತಾ ನಿಂತರು, ನನ್ನ ಸರದಿ ಬಂದಾಗ ಅವರಿಗೆ ಬಿಟ್ಟುಬಿಡೋಣ ಇಷ್ಟು ಹೊತ್ತು ಕಾದಿದ್ದೀನಲ್ಲ ಇವರದ್ದಾಗುವವರೆಗೂ ಕಾದೇ ಬಿಡೋಣ ಅಂದುಕೊಂಡೆ. ಆದ್ರೆ ಈಗಲೇ ಹೇಳೋದು ಬೇಡ ನನ್ನ ಸರದಿ ಬಂದಾಗ ಅವರಿಗೆ ಹೋಗಲು ಹೇಳಿದ್ರಾಯ್ತು ಅಂತ ಸುಮ್ಮನಿದ್ದೆ.

ಆದರೆ ಅವರಿಗೆ ಒಂದೈದು ನಿಮಿಷವೂ ಕಾಯಲಾಗದೆ ಅಲ್ಲಿಂದ ಹೊರಟು ಹೋದರು..

ಅವರು ಹೇಳಿದಂತೆ ಅವರ ಅಮ್ಮನಿಗೆ ಬಿಪಿ ಜಾಸ್ತಿ ಇದ್ದಿದ್ದೇ ನಿಜ ಆಗಿದ್ರೆ ಸಲ್ಪ ಹೊತ್ತು ಕಾದು ಡಾಕ್ಟರ್ ಹತ್ತಿರ ತೋರಿಸಿಕೊಂಡೇ ಹೋಗುತ್ತಿದ್ದರು, ಇನ್ನು ಸಲ್ಪ ಕಾಯಬೇಕು ಅಂದಾಗ ಬಿಪಿ ಕಮ್ಮಿ ಆಯಿತಾ? ಜನಕ್ಕೆ ಅನುಕಂಪ ತೋರಿಸ್ತಾರೆ ಅಂದರೆ ದುರ್ಬಳಕೆ ಮಾಡಿಕೊಳ್ಳೋರೇ ಹೆಚ್ಚು ಅಂತ ಬೇಸರ ಆಯಿತು.

Comments !