ಶುಭಶಕುನ

ಹಂಗೇ ಒಬ್ಬ ಫ್ರೆಂಡ್ ಗೆ ಹೇಳ್ತಾ ಇದ್ದೆ, ವಸುಧೇಂದ್ರ ಅವರು ವರ್ಣಮಯ ಬುಕ್ಕಲ್ಲಿ ಬರ್ದಿದಾರೆ ಏನಂದ್ರೆ.. ಅವರ ಕಾರ್ ಡ್ರೈವರ್ ಮೊದಲನೇ ಸಲ ಓಡಿಸುವಾಗ ಮುಂದೆ ಜಾಗ ಇಲ್ಲದಿದ್ರೂ ಸಲ್ಪ ಮುಂದಕ್ಕೆ ಹೋಗಿ ಮತ್ತೆ ರಿವರ್ಸ್ ತಗೋತಾನಂತೆ. ಕೆಲ್ಸ ಶುರು ಮಾಡುವಾಗ ಮುಂದಕ್ಕೆ ಹೋಗಿ ಪ್ರಾರಂಭ ಮಾಡ್ಬೇಕು ಅಂತ್ಲಂತೆ.

ಕಾರು ರಿವರ್ಸು

(ವಸುಧೇಂದ್ರರ ವರ್ಣಮಯ ಪುಸ್ತಕದಲ್ಲಿ ಒಂದು ನೋಟ)

ಫ್ರೆಂಡ್ ಹೇಳಿದ.. "ಹೇ ನಾನೂ ಹಂಗೇ ಮಾಡ್ತೀನಿ ಕಣೋ, ನನ್ನ ಸುಮಾರು ಫ್ರೆಂಡ್ಸ್ ಕೂಡ ಹಂಗೇ ಮಾಡ್ತಾರೆ."

ಓಹ್ ಹಂಗಾದ್ರೆ ನಂಗೆ ಮಾತ್ರ ಈ ವಿಷಯ ಗೊತ್ತಿಲ್ಲದೇ ಇರೋದು, ಛೇ ಇಷ್ಟು ದಿನ ಹೊರಡುವಾಗ ಸೀದಾ ಹಿಂದಕ್ಕೆ ತಗೊಳ್ತಾ ಇದ್ದೆ.. ಅದಕ್ಕೇ ಇರ್ಬೇಕು ಟ್ರಾಫಿಕ್ ಜಾಮ್ ಅಂತೆಲ್ಲಾ ರಗಳೆ ಆಗ್ತಿದ್ದಿದ್ದು.

ಇಷ್ಟಾದ ಮೇಲೆ ಮೊದಲಿನಂಗೆ ಕಾರು ಓಡ್ಸಕ್ಕಾಗತ್ತಾ? ಹೊಸ ಅಭ್ಯಾಸ ಶುರು ಆಯ್ತು.

ಸುಮಾರು ದಿನ ಹಾಗೇ ನಡೀತು, ಆದ್ರೂ ಹೆಚ್ಚಿನ ಬದಲಾವಣೆಗಳೇನೂ ಕಾಣಿಸ್ಲಿಲ್ಲ. ಒಂದು ದಿನ ಅನ್ನಿಸಿತು, ಕಾರ್ ಅಲ್ಲಿ ಎಡಗಾಲಿಟ್ಟು ಹತ್ತುತೀನಲ್ಲ ಅದಕ್ಕೇ ಇರ್ಬೇಕು ಈ ವಿಧಾನ ಉಪಯೋಗಿಸಿದ್ರೂ ಫಲ ಕಾಣದೇ ಇರೋದು ಅಂತ. ಹಾಗನಿಸಿದ್ದೇ ತಡ, ಮೊದಲು ಬಲಗಾಲಿಟ್ಟು ಹತ್ತೋಣ ಅಂತ ಟ್ರೈ ಮಾಡಿದೆ, ಸಿಕ್ಕಾಪಟ್ಟೆ ಕಷ್ಟ ಆಯ್ತು, ಹತ್ತೋವಾಗ imbalance ಆಗಿ ಬೀಳೋ ಹಾಗಾಯ್ತು.

ಇಂತಾ ಪ್ರಾಬ್ಲಮ್ ಇರೋದ್ರಿಂದ್ಲೇ ಅಮೇರಿಕಾದಲ್ಲಿ ಡ್ರೈವಿಂಗ್ ಸೀಟ್ ಎಡಗಡೆ ಮಾಡಿರೋದು. ಛೇ.. ನಮ್ಮ ಇಂಡಿಯಾದಲ್ಲಿ ಇಂತ ಸೀರಿಯಸ್ ತೊಂದರೆಯ ಬಗ್ಗೆ ತಲೆನೇ ಕೆಡಿಸ್ಕೊಂಡಿಲ್ವಲ್ಲ...

Comments !