ಸಂತಸ
Dec 7, 2008
1 minute read.
ಕನ್ನಡ ರಾಜ್ಯೋತ್ಸವ
ಸಂತಸ
kannadablog
ನಮ್ಮ ಕಂಪನಿಯಲ್ಲಿ ಕನ್ನಡ ರಾಜ್ಯೋತ್ಸವ ೧೫ ಕ್ಕೂ ಹೆಚ್ಚು ದಿನಗಳು ಆಚರಿಸಿದೆವು. ಕಬಡ್ಡಿ, ಲಗೋರಿ, ರಾಜ್ಯೋತ್ಸವ ರಿಲೇ ಮುಂತಾದ ಆಟಗಳ ಜೊತೆ, ರಂಗೋಲಿ, ಚಿತ್ರ ಬರೆಯುವ ಸ್ಪರ್ಧೆ ಗಳನ್ನು ಏರ್ಪಡಿಸಿದ್ದರು. ೨೭ ನೇ ತಾರೀಕಿನಂದು ರಾಜ್ಯೋತ್ಸವ ಆಚರಣೆಯ ಕೊನೆಯ ದಿನದಂದು, ಚಾಮಯ್ಯ ಮೇಷ್ಟ್ರು (ಡಾ| ಕೆ. ಎಸ್. ಅಶ್ವಥ್ ) ಬಂದಿದ್ರು, ಪ್ರಾಣೇಶ್ ಬಂದಿದ್ರು, ಮೈಸೂರ್ ಆನಂದ್ ಬಂದಿದ್ರು, ವಿಕ್ರಮ್ ಸಂಪತ್ ಬಂದಿದ್ರು. ಅವತ್ತು ನಾವೆಲ್ಲ ತುಂಬ ಸಂತಸದಿಂದ ರಾಜ್ಯೋತ್ಸವ ಆಚರಿಸಿದೆವು.
ನಾನು ಬರೆದ ಚಿತ್ರಕ್ಕೆ ಮೂರನೇ ಬಹುಮಾನ ಬಂತು, ಹಾಗೇ ಅಶ್ವಥ್ ರವರ ಕೈಯಲ್ಲಿ ಬಹುಮಾನ ತೆಗೆದುಕೊಳ್ಳುವ ಅವಕಾಶ ಸಿಕ್ಕಿತು, ನನ್ನ ಆ ಸಂತಸದ ಕ್ಷಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. :) ಅಲ್ಲಿ ಹೋದಾಗ ಅವರನ್ನು ಮಾತನಾಡಿಸಬೇಕೆಂದು ಅಂದುಕೊಂಡಿದ್ದೆ, ಆದರೆ ನನಗಾದ ಸಂತೋಷದಲ್ಲಿ ಮಾತೇ ಹೊರಡಲಿಲ್ಲ.
ಸಂತಸದ ಕ್ಷಣ
ನಾ ಬರೆದ ಚಿತ್ರ
About Aravinda VK
Partner at Kadalu Investments, Creator of Sanka, Creator of Chitra, GlusterFS core team member, Maintainer of Kadalu Storage