ಸಂಕ - ಹೊಸ ಆವೃತ್ತಿ v2

ಒಮ್ಮೆ ನನಗೆ ASCII ಯಲ್ಲಿ ಬರೆದ ಲೇಖನ ಯುನಿಕೋಡ್ ಗೆ ಬದಲಾಯಿಸ ಬೇಕಾಗಿದ್ದರಿಂದ Ascii to Unicode ತಂತ್ರಾಂಶ ಬರೆದುಕೊಂಡಿದ್ದೆ. ಆನಂತರ ಎಲ್ಲರಿಗೂ ಉಪಯೋಗವಾಗಲಿ ಎಂದು ವೆಬ್ ಸೈಟ್ ಮಾಡಿದೆ, ಅದರ ಬಗ್ಗೆ ಇಲ್ಲಿ ಬರೆದಿದ್ದೇನೆ ನೋಡಿ.

ಆ ನಂತರ ಈ ತಂತ್ರಾಂಶದ ತೊಂದರೆಗಳನ್ನು ಸರಿಪಡಿಸುತ್ತ, ಯುನಿಕೋಡ್ ನಿಂದ Ascii ಗೆ ಬದಲಾಯಿಸುವ ತಂತ್ರಾಂಶದ ಅಗತ್ಯವೂ ಎದುರಾಯಿತು. ಆಗ ಮಾಡಿದ ತಂತ್ರಾಂಶದ ಹೆಸರೇ "ಸಂಕ".

Sanka

ಇತ್ತೀಚೆಗೆ "ಸಂಕ"ವನ್ನು ಎಷ್ಟು ಜನ ಉಪಯೋಗಿಸುತ್ತಿದ್ದಾರೆ ಎಂದು ಗೂಗಲ್ ಅನಲಿಟಿಕ್ಸ್ ನಲ್ಲಿ ನೋಡಿದೆ. ದಿನಕ್ಕೆ 1000 ದಿಂದ 1500 ಪೇಜ್ ವೀವ್ಸ್ ಇದೆ ಎಂದು ತಿಳಿದು ಸಂತಸವಾಯ್ತು. ತಮ್ಮ ಖುಷಿಯನ್ನು ಈಮೈಲ್ ಬರೆದು ಹಂಚಿಕೊಂಡವರಿಗೂ ಧನ್ಯವಾದಗಳು.

ಹಾಗೆಯೇ ಕೆಲವು ತೊಂದರೆಗಳಿದ್ದುದನ್ನೂ ಈಮೈಲ್ ಬರೆದು ತಿಳಿಸಿದ್ದರು. ಈ ಸಲ ಕನ್ನಡ ರಾಜ್ಯೋತ್ಸವದ ಖುಷಿಯಲ್ಲಿ ಇದನ್ನು ಸರಿಪಡಿಸೋಣವೆನ್ನಿಸಿತು.

ಹೊಸ ಆವೃತ್ತಿಯಲ್ಲಿನ ಬದಲಾವಣೆಗಳು:

  • ಜ್ಞ ಅಕ್ಷರದ ತೊಂದರೆಗಳು(ಪ್ರತಿಜ್ಞೆ, ಯಜ್ಞ ಇತ್ಯಾದಿ)
  • ಪು, ಪೂ, ಪೋ, ಫು, ಫೂ, ಫೋ ಅಕ್ಷರಗಳ ಸರಿಯಾದ ಬದಲಾವಣೆ.(ASCII ಗೆ ಬದಲಾದಾಗ)
  • ದೀರ್ಘದ ಜೊತೆ ಬರುವ ಒತ್ತಕ್ಷರಗಳನ್ನು ಸರಿಯಾದ ಜೋಡಣೆ(ಅಯ್ಯೋ, ಕ್ಯಾಂಪ್ಕೋ, ಬೇಡಿಕೊಳ್ಳುತ್ತಿದ್ದೇನೆ ಇತ್ಯಾದಿ)
  • ಯುನಿಕೋಡ್ ಗೆ ಬದಲಾದಾಗ ಒತ್ತಕ್ಷರದ ಜೊತೆ ದೀರ್ಘ ಬಂದಾಗಿನ ತೊಂದರೆಗಳು.
  • ಪದಗಳ ಮದ್ಯ ಅಥವಾ ಅಕ್ಷರಗಳ ಮದ್ಯದಲ್ಲಿ ಹೆಚ್ಚಿನ Space ಬಿಟ್ಟಿದ್ದರೆ ಅದನ್ನು ಈಗ ತೆಗೆಯಬಹುದು.

ಇನ್ನು ಮುಂದೆ ಹಳೆಯ ASCII to Unicode ವೆಬ್ ಸೈಟ್ ಕೂಡ "ಸಂಕ" ಕ್ಕೆ ಕರೆದುಕೊಂಡು ಹೋಗುತ್ತದೆ(redirect).

ಈ ತೊಂದರೆಗಳನ್ನು ಸರಿಪಡಿಸಲು ಬೇಕಾದ Sample text ಕಳುಹಿಸಿದವರಿಗೆಲ್ಲರಿಗೂ ಮತ್ತು ಸಲಹೆಗಳನ್ನು ಕಳುಹಿಸಿದವರಿಗೆಲ್ಲರಿಗೂ ಧನ್ಯವಾದಗಳು.

ಇನ್ನೂ ಕೆಲವು ತೊಂದರೆಗಳು ಉಳಿದಿವೆ. ಬಳಸಿ ನೋಡಿ ಹೇಳಿ, ಈ ನವಂಬರ್ ನಲ್ಲೇ ಸರಿಪಡಿಸಲು ಪ್ರಯತ್ನಿಸುತ್ತೇನೆ.

Comments !