ಆಸ್ಕಿ(ASCII) ಮತ್ತು ಯುನಿಕೋಡಿಗೆ ಕನ್ನಡದ ಸಂಕ
ಕಳೆದ ವರ್ಷ ಎಲ್ಲರಿಗೂ ಪ್ರಶ್ನೆಗಳನ್ನು ಕೇಳಿದ್ದೆ, ಈಗಾಗಲೇ ASCII ಇಂದ ಯುನಿಕೋಡ್ ಗೆ ಬದಲಾಯಿಸಲು ತಂತ್ರಾಂಶ ಇದೆ(aravindavk.in/ascii2unicode), ಆದರೆ ಯುನಿಕೋಡ್ ನಿಂದ ASCII ಗೆ ಮಾಡಲು ಬೇಕೇ ಎಂದು(ಲಿಂಕ್ ಇಲ್ಲಿದೆ). 37 ಜನ ಅದಕ್ಕೆ ಪ್ರತಿಕ್ರಿಯಿಸಿ ಬೇಕು ಅಂದಿದ್ದರು, ಆದರೆ ಬಹಳ ಸಮಯ ನನಗೆ ಅದರ ಕೆಲಸ ಪ್ರಾರಂಬಿಸಲು ಸಾಧ್ಯವಾಗಿರಲಿಲ್ಲ. ಈಗ ಪುನಃ ಈ ತಂತ್ರಾಂಶದ ಕೆಲಸ ಕೈಗೆತ್ತಿಕೊಂಡಿದ್ದೇನೆ.
ಬಹಳಷ್ಟು Testಗಳನ್ನು ಸೇರಿಸಿದ್ದೇನೆ, ಆದರೆ ಇನ್ನೂ ಬಹಳಷ್ಟು Tests ಬೇಕು ಈ ತಂತ್ರಾಂಶ ಉಪಯೋಗಿಸಲು ಯೋಗ್ಯವಾಗಲು. ಹೊಸದಾಗಿ ಬರೆದಿರುವುದರಿಂದ ಕೆಲವು ತೊಂದರೆಗಳು ಇನ್ನೂ ಉಳಿದಿರಬಹುದು, ಮುಂಬರುವ ದಿನಗಳಲ್ಲಿ ಅವುಗಳನ್ನು ಸರಿಪಡಿಸುತ್ತೇನೆ. ನಿಮಗೇನಾದರೂ ತೊಂದರೆ ಎನಿಸಿದರೆ ನನಗೆ ತಿಳಿಸಿ.
ಸಂಕದ ಲಿಂಕು ಇಲ್ಲಿದೆ aravindavk.in/sanka. ಈ ತಂತ್ರಾಂಶದ ಸಹಾಯದಿಂದ ಆಸ್ಕಿ(ASCII) ಇಂದ ಯುನಿಕೋಡ್(Unicode) ಗೆ ಹಾಗೂ ಯುನಿಕೋಡ್ ನಿಂದ ಆಸ್ಕಿ ಗೆ ಬದಲಾಯಿಸಿಕೊಳ್ಳಬಹುದು.
ಏನು ಹೆಸರಿಡೋದು ಅಂತ ಯೋಚಿಸುತ್ತ ಇದ್ದಾಗ "ಸಂಕ" ಹೆಸರು ಇದಕ್ಕೆ ಸೂಕ್ತ ಅನ್ನಿಸಿತು. ಹೆಸರು ಹೇಗಿದೆ ತಿಳಿಸಿ :)
ಕನ್ವರ್ಟರ್ ಬಗ್ಗೆ ಬಹಳಷ್ಟು ಬರೆಯೋದಿದೆ, ಮುಂದಿನ ಬ್ಲಾಗ್ ಗಳಲ್ಲಿ ಕನ್ವರ್ಟ್ ಮಾಡುವುದರ ಬಗ್ಗೆ, ಅದಕ್ಕೆ ಬಳಸಿದ ತಂತ್ರಜ್ಞಾನದ ಬಗ್ಗೆ ಬರೆಯುತ್ತೇನೆ. ಈಗ ಸದ್ಯಕ್ಕೆ ಬಳಸಿ ನೋಡಿ ಹಾಗೂ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ.
About Aravinda VK
Partner at Kadalu Investments, Creator of Sanka, Creator of Chitra, GlusterFS core team member, Maintainer of Kadalu Storage