ಪುಟ್ಟನ ಟಾಮಿ

ಪುಟ್ಟಾ ಟಾಮಿ ಬಂತಾ ನೋಡು. ಸಂಜೆನೇ ಬಿಟ್ಟಿದ್ದು ಎಲ್ಲಿ ಹೋಯ್ತೋ ಏನೋ!

ಪುಟ್ಟ ನೋಡಿಕೊಂಡು ಬಂದ, "ಇಲ್ಲ ಅಮ್ಮಾ"

ಪುಟ್ಟನ ಟಾಮಿ

ಸರಿ ಬಂದ್ರೆ ಊಟ ಮಾಡುತ್ತೆ ಅಂತ ಅದರ ತಟ್ಟೆಗೆ ಅನ್ನ ಹಾಕಿಟ್ಟು ಬಂದ್ಲು.

ಮರುದಿನ ಬೆಳಗ್ಗೆ ತೋಟದ ಕೆಲಸಕ್ಕೆ ಬರೋ ರಾಮು ಗಾಬರಿಯಿಂದ ಓಡುತ್ತಾ ಬಂದ, ನಾಯಿಯ ತಟ್ಟೆಯಲ್ಲಿ ಹಿಂದಿನ ದಿನ ಹಾಕಿದ್ದ ಅನ್ನ ನೋಡುತ್ತಾ... "ಅಮ್ಮಾವ್ರೇ ಹೈವೇನಲ್ಲಿ ನಿಮ್ಮನೆ ನಾಯಿಗೆ..."

"ಶ್! ನಿಧಾನ ಹೇಳೋ ಏನಾಯ್ತು ಅಂತ, ಪುಟ್ಟಂಗೆ ಕೇಳೋದು ಬೇಡ."

ಅಷ್ಟರಲ್ಲಾಗಲೇ ಮಂಚದ ಮೇಲೆ ಎದ್ದು ಕುಳಿತಿದ್ದ ಪುಟ್ಟ ಬಿಕ್ಕಳಿಸಿ ಅಳುತ್ತಿದ್ದ.

Comments !