ARAVINDA VISHWANATHAPURA

PPFನಲ್ಲಿ invest ಮಾಡುತ್ತಿದ್ದರೆ...

Aug 14, 2015
1 minute read.
finance kannada

ನನ್ನ PPF(Public Provident Fund) ಅಕೌಂಟ್ ನಲ್ಲಿದ್ದ ಹಣವನ್ನು ನನ್ನ ಬಡ್ಡಿ ಲೆಖ್ಖದೊಂದಿಗೆ ಹೊಂದಿಸಲು ಪ್ರಯತ್ನ ಮಾಡ್ತಿದ್ದೆ. ಆದರೆ ಅಕೌಂಟಿನಲ್ಲಿದ್ದ ಹಣ ನನ್ನ ಲೆಕ್ಕಾಚಾರದಷ್ಟಿರಲಿಲ್ಲ. ಅದ್ಯಾಕೆ ಅಂತ ಓದುತ್ತಾ ಹೋದಂತೆ ಇದುವರೆಗೂ ಗಮನ ಹರಿಸದ ಬಹಳಷ್ಟು ವಿಚಾರಗಳು ತಿಳಿದವು. ನನ್ನಂತೆಯೇ ಯಾರಿಗಾದರೂ ಈ ತರಹದ ತೊಂದರೆ ಆಗಿದ್ದರೆ ಈ ಲೇಖನ ಸಹಾಯಕ್ಕೆ ಬರಬಹುದು ಹಾಗೂ ನನ್ನ ನೆನಪಿಗೂ ಇರುತ್ತೆ ಅಂತ ಬರೆಯುತ್ತಿದ್ದೇನೆ.

ನಾನು ಪ್ರತೀ ವರ್ಷ financial year ಮುಗಿಯುತ್ತೆ ಅನ್ನುವಾಗ, ಉಳಿತಾಯ ತೋರಿಸುವ ಸಲುವಾಗಿ, PPF ಅಕೌಂಟ್ ಗೆ ಹಣ ಹಾಕುತ್ತಿದ್ದೆ. ಆದರೆ ಈ ಕೆಳಗಿನ ವಿಷಯಗಳನ್ನು ಯೋಚಿಸದೆ ಇದುವರೆಗೂ ಕಡಿಮೆ ಬಡ್ಡಿ ಪಡೆಯುತ್ತಿದ್ದೆ, ಇನ್ನು ಮುಂದಿನ ವರ್ಷಗಳಲ್ಲಾದರೂ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತೇನೆ.

  1. ಇಂಟರೆಷ್ಟ್ ವರ್ಷಕ್ಕೇ ಆದರೂ ಪ್ರತೀ ತಿಂಗಳೂ ಲೆಖ್ಖ ಹಾಕಿ ಕೊನೆಗೆ ಸೇರಿಸುತ್ತಾರೆ. ಉದಾಹರಣೆಗೆ, ಈ ವರ್ಷ ಜುಲೈ ನಲ್ಲಿ ಹಣ ಕಟ್ಟಿದ್ದರೆ, ಜುಲೈ ನಿಂದ ಮಾತ್ರ ಲೆಖ್ಖ ಮಾಡುತ್ತಾರೆ.

  2. ಅದೇ ತರಹ 5ನೇ ತಾರೀಕಿನ ಒಳಗೆ ಕಟ್ಟಿದ್ದರೆ ಮಾತ್ರ ಆ ಬಡ್ಡಿ ಹಣಕ್ಕೆ ಆ ತಿಂಗಳಿಂದೂ ಸೇರಿಸಿಕೊಳ್ಳುತ್ತಾರೆ. ಉದಾಹರಣೆಗೆ, ಜುಲೈ 5ರ ಒಳಗೆ ಹಣ ಕಟ್ಟಿದ್ದರೆ, ಆ ಹಣಕ್ಕೆ ಜುಲೈ ಗೂ ಬಡ್ಡಿ ಸಿಗುತ್ತೆ, ಇಲ್ಲವಾದರೆ ಆ ಹಣಕ್ಕೆ ಆಗಷ್ಟ್ ನಿಂದ ಬಡ್ಡಿ.

  3. PPF ಅಕೌಂಟ್ ಗೆ ವರ್ಷವೆಂದರೆ ಏಪ್ರಿಲ್ ನಿಂದ ಮಾರ್ಚ್ ವರೆಗೆ, ಬಡ್ಡಿಯ ಲೆಕ್ಕಾಚಾರವೂ ಹಾಗೇ. ಮಾರ್ಚ್ 31ಕ್ಕೆ ನಮ್ಮ ಅಕೌಂಟ್ ಗೆ ಬಡ್ಡಿ ಸೇರಿಸುತ್ತಾರೆ.

  4. ವರ್ಷಕ್ಕೆ ಒಮ್ಮೆ ಹಣ ಕಟ್ಟುವವರಾದರೆ, ಏಪ್ರಿಲ್ 1-5ನೇ ತಾರೀಕಿನ ಒಳಗೇ ಕಟ್ಟಿ. ಆಗ ಆ ವರ್ಷದಲ್ಲಿ 12 ತಿಂಗಳೂ ಬಡ್ಡಿ ಸಿಗುತ್ತೆ.

  5. ಪ್ರತೀ ತಿಂಗಳು ಹಣ ಕಟ್ಟುವವರಾದರೆ, ಪ್ರತೀ ತಿಂಗಳು 1-5ನೇ ತಾರೀಕಿನ ಒಳಗೆ ಕಟ್ಟಿ, ಇಲ್ಲದಿದ್ದರೆ ಆ ಹಣಕ್ಕೆ ಒಂದು ತಿಂಗಳ ಬಡ್ಡಿ ಇಲ್ಲವಾಗುತ್ತೆ.

  6. 15 ವರ್ಷಗಳ ನಂತರ ನಮಗೆ ಸಿಗುವ ಬಡ್ಡಿಗೂ ತೆರಿಗೆ ಇಲ್ಲ.

  7. FD ಅಥವಾ NSC ಯಲ್ಲಿ invest ಮಾಡಿದರೆ, ಬಡ್ಡಿಗೂ ತೆರಿಗೆ ಕಟ್ಟಬೇಕಲ್ಲ ಅಂತ ಯೋಚನೆ ಇದ್ದರೆ, PPF ಅಕೌಂಟ್ ಗೆ ಕೊನೆಯ 3-5 ವರ್ಷಗಳು ಸಾಧ್ಯವಾದಷ್ಟು ಕಟ್ಟಿ(Max 1.5lakhs). FD/NSC ಗಳಂತೆಯೇ ಉಪಯೋಗ ಸಿಗುತ್ತೆ.

ppf dashboard
ನನ್ನ ಈಗಿನ dashboard, ಲಿಬ್ರೆ ಆಫೀಸ್ ತಂತ್ರಾಂಶ ಉಪಯೋಗಿಸಿ ಮಾಡಿಕೊಂಡಿದ್ದು.(ವರ್ಷಕ್ಕೆ ಒಮ್ಮೆ ಕಟ್ಟುವವರಿಗಾಗಿ)

ವಿ.ಸೂ: ಚಿತ್ರದಲ್ಲಿರುವ ಹಣ, ನಿಜವಾಗಿಯೂ ನಾನು invest ಮಾಡಿರುವ ಹಣ ಅಲ್ಲ, ಉದಾಹರಣೆಗೋಸ್ಕರ ಅಷ್ಟೆ. :)

Months ಅಂದರೆ, ಆ ವರ್ಷ ಕಟ್ಟಿದ ಹಣಕ್ಕೆ ಬಡ್ಡಿ ಸಿಗುವ ತಿಂಗಳುಗಳು ಅಂತ. ಉದಾಹರಣೆಗೆ, ಏಪ್ರಿಲ್ 2ಕ್ಕೆ ಹಣ ಕಟ್ಟಿದ್ದರೆ 12 ತಿಂಗಳುಗಳು ಬಡ್ಡಿ ಸಿಗುತ್ತೆ, ಜೂನ್ 10 ಕ್ಕೆ ಹಣ ಕಟ್ಟಿದ್ದರೆ, ಆ ವರ್ಷದಲ್ಲಿ 9 ತಿಂಗಳುಗಳು ಬಡ್ಡಿ ಸಿಗುತ್ತೆ. ಜೂನ್ 4ಕ್ಕೆ ಕಟ್ಟಿದ್ದರೆ, 10 ತಿಂಗಳ ಬಡ್ಡಿ ಸಿಗುತ್ತೆ.

Interest = Opening x 8.7% + (Yearly x ((8.7/12) x Number of Months)%)
Closing = Opening + Yearly + Interest

ಹಣಕಾಸಿನ ವಿಚಾರವಾಗಿ ಬರೆಯುತ್ತಿರುವ ನನ್ನ ಮೊದಲ ಲೇಖನ. ಏನಾದರೂ ಸಲಹೆಗಳಿದ್ದರೆ, ಪ್ರಶ್ನೆಗಳಿದ್ದರೆ ಹೇಳಿ. ಇನ್ನು ಮುಂದೆಯೂ ಈ ತರಹದ ಲೇಖನಗಳನ್ನು ಬರೆಯುವ ಪ್ರಯತ್ನ ಮಾಡುವೆ. :) #winwin

About Aravinda Vishwanathapura

Co-Founder & CTO at Kadalu Technologies, Creator of Sanka, Creator of Chitra, GlusterFS core team member, Maintainer of Kadalu Storage
Contact: Linkedin | Twitter | Facebook | Github | mail@aravindavk.in