ಫೋಟೋಸ್ upload

ಮೊನ್ನೆ ಫ್ರೆಂಡ್ ಒಬ್ಬ ಸಿಕ್ಕಿದ್ದ..

"ಫೋಟೋಸ್ upload ಮಾಡಕ್ಕೂ ಮುಂಚೆ ಎಡಿಟ್ ಮಾಡ್ತೀಯಾ?"

"ನಾರ್ಮಲಿ ಮಾಡಲ್ಲ, ಕೆಲವೊಂದ್ಸಲ ಕ್ರಾಪಿಂಗ್ ಮತ್ತೆ ಬ್ರೈಟ್‍ನೆಸ್ ಸಲ್ಪ ಅಡ್ಜುಸ್ಟ್ ಮಾಡ್ತೀನಿ"

"ಮತ್ತೆ upload ಮಾಡುವಾಗ resize ಮಾಡ್ತೀಯಾ?"

ಫೋಟೋಗ್ರಫಿ ಬಗ್ಗೆ ಸಲ್ಪ ಇಂಟರೆಷ್ಟ್ ಇರೋನು ಒಬ್ಬ ಸಿಕ್ಕಿದ ಮಾತಾಡಕ್ಕೆ ಅಂತ ಅನ್ನಿಸಿತು.

"ನಾನು digikam ಅಂತ ಒಂದು software ಉಪಯೋಗಿಸ್ತೀನಿ, ಅದ್ರಿಂದ flickr/picasa/facebook ಎಲ್ಲಿಗೆ ಬೇಕಾದ್ರೂ ಸುಲಭದಲ್ಲಿ upload ಮಾಡ್ಬೋದು, ಅದೇ resize ಮಾಡಿ upload ಮಾಡುತ್ತೆ"

"ಸುಮಾರು ಟೈಮ್ ತಗೋಳತ್ತಾ?"

ಸಲ್ಪ ಆ software ಬಗ್ಗೆನೂ ಸಲ್ಪ ಹೊಗಳೋಣ ಅನ್ನಿಸ್ತು, ಹೇಗಿದ್ರೂ ಬಹಳ ಆಸಕ್ತಿಯಿಂದ ಕೇಳ್ತಿದಾನೆ ಅಂದ್ಕೊಂಡೆ.

"ಹಂಗೇನಿಲ್ವಲೇ.. ಫೋಟೋಸ್ ಬೇಕಾದ್ದು ಸೆಲೆಕ್ಟ್ ಮಾಡಿದ್ರಾಯ್ತು ಮತ್ತೆ upload ಅಂತ್ರ ಕೊಟ್ರಾಯ್ತು.. "

"ಮತ್ತೇನೋ ರೋಗ ನಿಂಗೆ ಫೋಟೋಸ್ upload ಮಾಡಕ್ಕೆ, ನಮ್ಮ ಟ್ರಿಪ್ ಫೋಟೋಸ್ ಎಲ್ಲ ಯಾವಾಗ upload ಮಾಡ್ತೀಯಾ?"

"..."

/me escape

Comments !