ಪೆಂಗ್ವಿನ್ ಪುರಾಣ

ಲಿನಕ್ಸ್ ಇಷ್ಟಪಡೋರು ಯಾಕೆ ಪೆಂಗ್ವಿನ್ ಇಷ್ಟಪಡ್ತಾರೆ ಅನ್ನೋದು ಬಹಳಷ್ಟು ಸ್ನೇಹಿತರ ಪ್ರಶ್ನೆ. ಪೆಂಗ್ವಿನ್ ಅಂದ್ರೆನೇ ಲಿನಕ್ಸ್ ಅಂತನೇ ಮನಸಲ್ಲಿ ಬರೋವಷ್ಟು ಬಳಕೆಯಾಗಿಬಿಟ್ಟಿದೆ. ಪೆಂಗ್ವಿನ್ ಗಳ ಒಗ್ಗಟ್ಟು ಎಲ್ಲರ ಪ್ರಶ್ನೆಗಳಿಗೆ ಉತ್ತರ ಅಂತ ನನ್ನ ಅನಿಸಿಕೆ. :)

ಗೊಂಬೆಗಳ ಅಂಗಡಿಗೆ ಯಾವಾಗಲಾದರೂ ಹೋದರೆ ಪೆಂಗ್ವಿನ್ ಇದ್ಯಾ ಅಂತ ಕಣ್ಣಾಡಿಸುವುದು ಅಭ್ಯಾಸ, ಬಹಳಷ್ಟು ಕಡೆ ಪೆಂಗ್ವಿನ್ ಗೊಂಬೆ ತರಿಸೋದೇ ಇಲ್ಲ. ಮುಂಚೆ ಮೈಸೂರಲ್ಲಿ ಇದ್ದಾಗ ಪೆಂಗ್ವಿನ್ ಗೊಂಬೆಗಳನ್ನ ಹುಡುಕಿ ಸುಸ್ತಾಗಿದ್ದೆ, ಕೊನೆಗೆ ಆಫೀಸ್ ನ ಸಹಪಾಟಿಯೊಬ್ಬರ ಬಳಿ ಪೆಂಗ್ವಿನ್ ಗೊಂಬೆ ಇದೆ ಎಂದಾಗ ಬಹಳ ಖುಷಿಯಾಗಿತ್ತು. ಅವರನ್ನು ಈ ಗೊಂಬೆ ನನಗೆ ಕೊಡಿ ಅದರ ಬದಲಿಗೆ ಬೇರೆ ಎಷ್ಟು ಗೊಂಬೆ ಬೇಕಾದರೂ ಕೊಡ್ತೀನಿ ಅಂದಿದ್ದೆ.., ಅದಕ್ಕವರಿಗೆ ಇವನದ್ದೇನಪ್ಪ ಹುಚ್ಚು ಅಂದುಕೊಂಡು ಬೇರೆ ಗೊಂಬೆ ಕೊಡೋದೇನೂ ಬೇಡ ಹಾಗೇ ಕೊಡ್ತೀನಿ ಅಂದ್ರು.

ಕೊನೆಗೂ ಮನೆಗೊಂದು ಪೆಂಗು ಬಂತು, ಅದನ್ನ ಪುಸ್ತಕಗಳ ಕಪಾಟಿನಲ್ಲಿ ಇಟ್ಟಿದ್ದು, ಲ್ಯಾಪ್ ಟಾಪ್ ನ ಜೊತೆ ಇಟ್ಟಿದ್ದು, ಫೋಟೋ ತೆಗೆದದ್ದೋ ತೆಗೆದದ್ದು...

All poses

ಡೆಬಿಯನ್ ಲಿನಕ್ಸ್ ಉಪಯೋಗಿಸಲು ಪ್ರಾರಂಭಿಸಿದಾಗ ಬರೆದ ಚಿತ್ರ.

Penguin with Debian

ಪೆಂಗ್ವಿನ್ ಹುಚ್ಚು ನಮ್ಮ ಗುಂಪಲ್ಲಿ ಮತ್ಯಾರಿಗಿದೆ ಅಂತ ಹುಡುಕುತ್ತಾ ಹೋದೆ, ಪೆಂಗ್ವಿನ್ ಸಂಸಾರನೇ ಸಿಗ್ತಾ ಹೋಯ್ತು. :) ಶಶಿ ಅಂತೂ ಮೈಸೂರಿನ ತಮ್ಮ ಆಫೀಸಿನಲ್ಲಿ ಆನೆಯ ಮೇಲೆ ಪೆಂಗ್ವಿನ್ ಗೆ ಸವಾರಿ ಮಾಡಿಸಿದ್ದರು.

Penguin in Shashi office

ರಾಘವನ ಮನೆಯಲ್ಲಿ ಎರಡು ಪೆಂಗ್ವಿನ್.

Penguin in Raghava mane

ಇನ್ನು Linus Torvalds ಮನೆಯಲ್ಲಿ ಪೆಂಗ್ವಿನ್ ಗಳ ದೊಡ್ಡ ಗುಂಪೇ ಇದೆ ಅಂತ ಮೊನ್ನೆ ಮೊನ್ನೆ ತಿಳಿದು ಬಂತು :)

Ref: http://www.wired.com/wiredenterprise/2012/03/mr-linux/all/1 Photo: Jon Snyder/Wired

Penguins in Linus home

ನಮ್ಮನೇಲಿ ಒಂದೇ ಇದ್ದ ಪೆಂಗುಗೆ ಈಗ ಚನ್ನಪಟ್ಟಣದ ಎರಡು ಪುಟ್ಟ ಪೆಂಗ್ವಿನ್ ಗಳು ಜೊತೆಯಾಗಿವೆ.

Penguin Team

ನಿಮ್ಮ ಮತ್ತು ಪೆಂಗ್ವಿನ್ ಕತೆಗಳಿದ್ರೆ ಹಂಚಿಕೊಳ್ಳಿ.

ಇನ್ನೂ ಪೆಂಗ್ವಿನ್ ಗೊಂಬೆಗಳ ಹುಡುಕಾಟ ನಿಂತಿಲ್ಲ, ನಿಮಗೆ ಗೊತ್ತಿರುವ ಅಂಗಡಿಗಳಲ್ಲಿ ಎಲ್ಲಾದರೂ ಸಿಕ್ಕರೆ ಹೇಳಿ. ಗಿಫ್ಟೂ ಕೊಡಬಹುದು ಬೇಜಾರೇನಿಲ್ಲ :P

Comments !