ಓವರ್ ಕಾನ್ಫಿಡೆನ್ಸು

ಕಳೆದ ವಾರ ಕಾರಲ್ಲಿ ಊರಿಗೆ ಹೋಗ್ತಿರ್ಬೇಕಾದ್ರೆ ಹೈವೇನಲ್ಲಿ ಉಡುಪಿ ಹೋಟೆಲ್ ಅಂತ ಕಾಣಿಸ್ತು. ಸರಿ ತಿಂಡಿ ಇಲ್ಲೇ ತಿನ್ನೋಣ ಅಂತ ಕಾರ್ ನಿಲ್ಸಿ ಒಳಗೆ ಹೋದೆ.

"ತಿಂಡಿ ಏನಿದೆ?"

"ಈಗ ಇಡ್ಲಿ ಮಾತ್ರ ಇದೆ.. ಬೇರೆ ತಿಂಡಿ ಸಲ್ಪ ಲೇಟ್ ಆಗುತ್ತೆ"

"ಓಹ್ ಹೌದಾ.. ಹಾಗಾದ್ರೆ ಇಡ್ಲಿನೇ ಕೊಡಿ. "

ಅವರು ಒಳಗಿದ್ದವನತ್ರ ಒಂದು ಪ್ಲೇಟ್ ಇಡ್ಲಿ ತರಕ್ಕೆ ಹೇಳಿದ್ರು, ನಾನು ಅಷ್ಟರಲ್ಲಿ

"ನಾಲ್ಕು ಇಡ್ಲಿ ಕೊಡಿ"

ಅವರು ನನ್ನನ್ನ ಒಂತರಾ ನೋಡಿದ್ರು, ಇವರಿಗೆ ಏನಪ್ಪಾ ಆಯ್ತು ಅಂತ ಮನಸಲ್ಲೇ ಬೈಕೊಂಡೆ. ಅಷ್ಟೊತ್ತಿಗೆ ಒಳಗಿನಿಂದ ಹುಡುಗ ನಾಲ್ಕು ತಟ್ಟೆ ಇಡ್ಲಿಗಳನ್ನ ಎತ್ತರಕ್ಕೆ ಜೋಡಿಸಿಕೊಂಡು ಬಂದ. ನನಗೆ ತಲೆ ತಿರುಗ್ತು..

"ಅಯ್ಯೊ ಮಾರಾಯ್ರೆ ತಟ್ಟೆ ಇಡ್ಲಿನಾ? ಎರಡು ಕೊಡಿ ಸಾಕು.. "

ಅವನು ಎರಡು ಇಡ್ಲಿಗಳನ್ನ ವಾಪಸ್ ತಗೊಂಡು ಹೋದ, ಈಕಡೆ ಹೋಟಲ್ ಓನರ್ ಮನಸಲ್ಲೇ ನಗ್ತಿದ್ದುದನ್ನು ನೋಡದೇನೇ ಇಡ್ಲಿ ತಿನ್ನಲು ಶುರು ಮಾಡಿದೆ.

Comments !