ಓಪನ್ ಮೂವಿ Big Buck Bunny
ಬ್ಲೆಂಡರ್ ಎಂಬ ಒಂದು ಓಪನ್ ಸೋರ್ಸ್ ತಂತ್ರಾಂಶ ಇದೆ , ಅದನ್ನ ಬಳಸಿ 3D animations ಮಾಡಬಹುದು. ಅದೇ ಬ್ಲೆಂಡರ್ ಕಮ್ಯುನಿಟಿಯವರು ಓಪನ್ ಮೂವಿ ಮಾಡಿದ್ದಾರೆ. ಓಪನ್ ಮೂವಿ ! ಆಶ್ಚರ್ಯ ಆಯ್ತಾ? ಇದು ಸತ್ಯ :)
ಮೇ ೧೮, ೨೦೦೬ ನಲ್ಲಿ ಬ್ಲೆಂಡರ್ ತಂಡದಿಂದ "Elephants Dream" ಎಂಬ ಮೊದಲನೇ ಓಪನ್ ಮೂವಿ ಬಿಡುಗಡೆ ಮಾಡಿದರು.
ಮೇ ೩೧, ೨೦೦೮ ರಲ್ಲಿ "Big Buck Bunny" ಎಂಬ ಓಪನ್ ಮೂವಿ ಬಿಡುಗಡೆ ಮಾಡಿದರು.(ಇದೇ ಇಂದಿನ ಈ ಲೇಖನಕ್ಕೆ ಸ್ಪೂರ್ತಿ)
ಏನಿದು ಓಪನ್ ಮೂವಿ?
ಈ animation ಮೂವಿಗಳನ್ನ "Creative Commons" ಅನ್ನೋ ಲೈಸೆನ್ಸ್ ನಲ್ಲಿ ಬಿಡುಗಡೆ ಮಾಡಿದ್ದಾರೆ, ಅಂದರೆ ಈ ಮೂವಿಗಳನ್ನ ನಾವು ಡೌನ್ ಲೋಡ್ ಮಾಡಿ ನೋಡಬಹುದು. ಯಾವುದೇ ಪೈರಸಿಯ ತೊಂದರೆ ಇಲ್ಲದೆ ಬೇರೆ ಯವರಿಗೆ ಹಂಚಬಹುದು.ಅದೂ ಅಲ್ಲದೆ ಈ ಮೂವಿಯ production files ಗಳನ್ನೂ(ಪಾತ್ರಗಳು, ಸನ್ನಿವೇಶಗಳು , ಮೂವಿಯ ಸೋರ್ಸ್ ಕೋಡ್) ಡೌನ್ ಲೋಡ್ ಮಾಡಬಹುದು. ಆ ಪಾತ್ರಗಳನ್ನು ಬದಲಾಯಿಸಬಹುದು, ಅದನ್ನ ನೋಡಿ ಕಲಿಯಬಹುದು ಅಥವಾ ಅದನ್ನ ಉಪಯೋಗಿಸಿ ಬೇರೆಯವರಿಗೆ ತರಬೇತಿ ಕೊಡಬಹುದು.
ಅದನ್ನ ಮಾಡಿದವರಿಗೆ ಏನು ಸಿಗುತ್ತೆ ಅಂತ ಯೋಚ್ನೆ ಮಾಡ್ತಾ ಇರಬಹುದು ನೀವೀಗ,
-
ಬ್ಲೆಂಡರ್ ತಂತ್ರಾಂಶದ ಸಾದ್ಯತೆಗಳನ್ನ ಎಲ್ಲರಿಗೂ ತೋರಿಸಿ ಕೊಟ್ಟಂತಾಗುತ್ತೆ.
-
ಮೂವಿ ಮಾಡುವಾಗ ಅಥವಾ ಅದನ್ನ ಟೆಸ್ಟ್ ಮಾಡುವಾಗ ಏನಾದರೂ ತೊಂದರೆಯಾದರೆ, ಅದು ಬ್ಲೆಂಡರ್ ದೇ ತೊಂದರೆ ಆಗಿದ್ದರೆ ಅದನ್ನು ಸರಿಪಡಿಸಬಹುದು. ಇದರಿಂದ ತಂತ್ರಾಂಶ ಮತ್ತೂ stable ಆಗುತ್ತೆ.
-
Sponsors or Partners
-
DVD ಮಾರಾಟ. (ತುಂಬಾ ಜನ ಇದನ್ನ ಪ್ರೋತ್ಸಾಹ ಮಾಡುವುದಕ್ಕೇ DVD ತಗೊಳುತ್ತಾರೆ.)
-
ಡೊನೇಷನ್ ಗಳು.
-
ಕಮ್ಯುನಿಟಿಯ ಬಲ ಹೆಚ್ಚುತ್ತೆ.
ನಿಮ್ಮ ಅನಿಸಿಕೆಗಳನ್ನ ಬರೆಯಿರಿ. ಹಾಗೇ ಮೂವಿ ನೋಡಲು ಮರೆಯದಿರಿ :)
ನನ್ನ ಲ್ಯಾಪ್ ಟಾಪ್ ನಲ್ಲಿ ಡೌನ್ ಲೋಡ್ ಆಗುತ್ತಾ ಇದೆ(ಈಗ ೩೦% ಆಗಿದೆ) ಮೈಸೂರಿನವರಿಗೆ ಯಾರಿಗಾದರೂ ಈ ಮೂವಿ ಬೇಕಿದ್ದರೆ ನನ್ನನ್ನು ಸಂಪರ್ಕಿಸಬಹುದು. :)
About Aravinda Vishwanathapura
Co-Founder & CTO at Kadalu Technologies, Creator of Sanka, Creator of Chitra, GlusterFS core team member, Maintainer of Kadalu Storage