ಊಟದ ಸಮಯ

ಏನ್ ಜನಾನೋ ಯಪ್ಪಾ... ಊಟ ಮಾಡೋ ಟೈಮ್ ಅಲ್ಲಿ ಇಡ್ಲಿ ತಿಂತಾ ಕೂತಿದಾರೆ... ಅಂತ ಯೋಚಿಸುತ್ತಾ ಅಲ್ಲಿ ತಿನ್ನುತ್ತಾ ಕುಳಿತವ್ರನ್ನ ನೋಡ್ತಾ ವೆಜ್ ಪಾರ್ಕ್ ಒಳಗೆ ಹೋದೆ.

ಏನು ಕೊಡ್ಲಿ ಕೇಳಿದ... ಊಟ ಕೊಡ್ರೀ ಅಂದೆ.

"ಸಾರ್ ಊಟ ಕ್ಲೋಸ್ ಆಯ್ತು!"

"ಇಷ್ಟು ಬೇಗನಾ !? "

"ಮೂರು ಮುಕ್ಕಾಲಾಯ್ತು ಸಾರ್"

"ಓಹ್!.. ಸರಿ ಮತ್ತೇನಿದೆ?"

"ದೋಸೆ ಮತ್ತೆ ಇಡ್ಲಿ ಇದೆ"

ದೋಸೆಗೆ ಕಾದು ಕೂತ್ರೆ ಹಸಿವು ತಾಳಕ್ಕಾಗಲ್ಲ, ಇಡ್ಲಿ ಕೊಡಿ ಅಂದೆ.

***

ನಗ್ಬೇಡ್ರೀ... ನೀವೇ ಹೇಳಿ ಇನ್ನೇನ್ ಮಾಡುಕ್ಕಾಗುತ್ತೆ :P

Comments !