ನುಡಿ ಕನ್ನಡ Fonts
UPDATE
ಇವು ೧೮ ಲಕ್ಷದ ಯೋಜನೆಯಲ್ಲಿ ತಯಾರಾದ ಫಾಂಟ್ ಗಳಲ್ಲ ಅಂತ ತಿಳಿಸಿದ ಪವನಜ ಅವರಿಗೆ ಧನ್ಯವಾದಗಳು.
ನುಡಿ ತಂತ್ರಾಂಶ ಹೊಸತು ಬಿಡುಗಡೆಯಾಗ್ತಿದೆ ಅಂತ ಬೇರೆ ಎಲ್ಲೋ(ಇಲ್ಲಿ) ಸುದ್ದಿ ಓದಿ ತಿಳಿದುಕೊಂಡಿದ್ದಾಯ್ತು, ಅವ್ರ ವೆಬ್‍ಸೈಟ್‍ಗೆ ಹೋಗಿ ನೋಡಿದ್ರೆ ಅಂತಾದ್ದೇನು ಸುದ್ದಿನೇ ಇಲ್ಲ ಅನ್ನೋ ತರಹದಲ್ಲಿ ಇತ್ತು. ಈಗೇನು ಸುದ್ದಿಯಿಲ್ಲ ಬಹುಷಃ ಬಿಡುಗಡೆ ಆದ್ಮೇಲೆ ಅವ್ರ ವೆಬ್‍ಸೈಟ್‍ನಲ್ಲಿ ಹಾಕ್ತಾರೇನೋ ಅಂದುಕೊಂಡೆ. ಆಮೇಲೆ ಒಂದಷ್ಟು ದಿನಗಳು ಕಳೆಯಿತು, ಏನಾದ್ರೂ update ಇದ್ಯಾ ಅಂತ ನೋಡಕ್ಕೆ ಹೋದೆ, "ನುಡಿ ೫ ಅನುಷ್ಟಾಪಿಸಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ" ಅಂತ ಇತ್ತು, ಮುಂಚೆ ವರ್ಷನ್ ೪ ಇತ್ತು ಅಂತ ಗೊತ್ತಿದ್ದವರಿಗೆ ಈಗ ಹೊಸತು ಐದನೇ ವರ್ಷನ್ ಬಂದಿದೆ ಅಂತ ತಿಳಿಯುತ್ತೆ, ಹೊಸತಿರಬಹುದು ನೋಡೋಣ ಎಂದು ಡೌನ್‍ಲೋಡ್ ಮಾಡಿದೆ. ಹಾಗೇ ಅದೇ ವೆಬ್‍ಸೈಟ್‍ನ ಸುದ್ದಿ ಪುಟ ನೋಡಿದೆ Nudi ಆವೃತ್ತಿ ೪ ರ ಬಗ್ಗೆ ಇತ್ತು. ವೆಬ್‍ಸೈಟ್ ಕೂಡ ಹಳೇ ಜಮಾನದ, ಯುನಿಕೋಡ್ ಅಲ್ಲದ, ಫ್ಲಾಷ್ ಬಳಸಿ ಮಾಡಿದ್ದು. ಅದರಲ್ಲಿ ಏನೂ ಹುಡುಕಲೂ ಆಗಲ್ಲ.
ಅದೆಲ್ಲ ಬಿಡಿ ಹೇಳುತ್ತಾ ಹೋದರೆ ಮುಗಿಯೋದೇ ಇಲ್ಲ, ಇಲ್ಲಿ ಬರೆಯಲು ಹೊರಟ ಮುಖ್ಯ ವಿಷಯ ನೋಡೋಣ. ನಾನು ವಿಂಡೋಸ್ ಉಪಯೋಗಿಸೋದಿಲ್ಲವಾದ್ದರಿಂದ ನುಡಿ ಡೌನ್‍ಲೋಡ್ ನಲ್ಲಿ ಇದ್ದ .exe ಏನು ಮಾಡುತ್ತೆ ಅಂತ ನೋಡಕ್ಕೆ ಹೋಗಿಲ್ಲ, ಯಾರಾದರೂ ವಿಂಡೋಸ್ ಬಳಸುವರು ಆಸಕ್ತಿಯಿದ್ದರೆ ಅದರಲ್ಲೇನಿದೆ ಎಂದು ನೋಡಿ ಹೇಳಿ.
ನುಡಿ ಫಾಂಟ್‍ಗಳು
ಫಾಂಟ್ಸ್ ಗಳ ಹೆಸರುಗಳು ಯಾಕೆ ಇಷ್ಟು ಕೆಟ್ಟದಾಗಿ ಇಟ್ಟಿದಾರೋ ತಿಳಿಯಲಿಲ್ಲ, ಕನ್ನಡದಲ್ಲಿ ಹೆಸರುಗಳಿಗೆ ಬರವೇ? ಫಾಂಟ್‍ಗಳ ಹೆಸರುಗಳ ಕೊನೆಯಲ್ಲಿ "e" ಅಂತ ಇರೋದನ್ನು ಗಮನಿಸಿದ್ರಾ? ಅದೇ ತರಹ ಕೊನೆಗೆ "k" ಅಂತ ಇರುವ ಫಾಂಟ್‍ಗಳೂ ಇವೆ, ಇವೆರಡಕ್ಕೂ ಇರೋ ವ್ಯತ್ಯಾಸ ಎಂದರೆ "k" ಫಾಂಟ್ ಉಪಯೋಗಿಸಿ ಇಂಗ್ಲಿಷ್ ಅಂಕೆಗಳನ್ನು ಬರೆದರೂ ಅವು ಕನ್ನಡದ ಅಂಕಿಗಳಂತೆಯೇ ಕಾಣುತ್ತೆ. ಇದು ಯುನಿಕೋಡ್ ಪ್ರಕಾರ ತಪ್ಪು, ಯುನಿಕೋಡ್ ನಲ್ಲಿ ಇಂಗ್ಲಿಷ್ ಸಂಖ್ಯೆಗಳಿಗೂ ಕನ್ನಡ ಸಂಖ್ಯೆಗಳಿಗೂ ಬೇರೆ ಬೇರೆ ಕೋಡ್ ಇದೆ. ಹಾಗಾಗಿ "k" ಫಾಂಟ್ ಗಳು ಯುನಿಕೋಡ್ ಮಾನ್ಯತೆಗೆ ಬದ್ದವಾಗಿಲ್ಲ.
ಹೊಸ ರುಪಾಯಿ symbol ತಪ್ಪು ಕೋಡ್ ಬಳಸಿದೆ, ಮುಂಚಿನ symbol ನ ಜಾಗಕ್ಕೇ ಹೊಸತನ್ನು ಕೂರಿಸಿದೆ. ಯುನಿಕೋಡ್ ನಲ್ಲಿ ಬೇರೆ ಕೋಡ್ ಕೊಟ್ಟಿದ್ದಾರೆ(U+20B9).
ಫಾಂಟ್ಸ್ ಗಳು ಚೆನ್ನಾಗಿವೆ, ಯುನಿಕೋಡ್ ಮಾನ್ಯತೆಗೆ ಬೇಕಾದ ಬಹುತೇಕ ನಿಯಮಗಳನ್ನು ಫಾಂಟ್‍ನಲ್ಲಿ ಅಳವಡಿಸಿದ್ದಾರೆ, ಅದೇ ಒಂದು ಸಂತೋಷ. ಆದರೂ ಕೆಲವು ಫಾಂಟ್‍ಗಳು ನೋಡುವುದಕ್ಕೆ ಒಂದೇ ತರಹ ಕಾಣಿಸುತ್ತವೆ (ಕೇವಲ ಲೆಕ್ಕಕ್ಕೋಸ್ಕರ ಬೇರೆ ಮಾಡಿದಂತಿದೆ). ಈ ನುಡಿ ಫಾಂಟ್‍ಗಳನ್ನು ಹಾಗೂ ತಂತ್ರಾಂಶವನ್ನು ಮುಕ್ತ ತಂತ್ರಾಂಶವಾಗಿ ಬಿಡುಗಡೆ ಮಾಡುತ್ತಾರೆ ಎಂದು ಕೇಳಿದ್ದೆ(ಇಲ್ಲಿ), ಆದರೆ ಈಗ ಅದರ ಬಗ್ಗೆ ಎಲ್ಲೂ ಮಾಹಿತಿಯಿಲ್ಲ. ಪ್ರತೀ ತಂತ್ರಾಂಶದ ಜೊತೆ ಇರಬೇಕಾದ ಲೈಸೆನ್ಸ್ ಪ್ರತಿ ಮತ್ತು ರಿಲೀಸ್ ನೋಟ್ಸ್ ಎಲ್ಲೂ ಕಾಣಲಿಲ್ಲ.
ಫಾಂಟ್ ಮಾಡುವುದು ಕಠಿಣವೇ, ಅದರಲ್ಲೂ ಬೇಕಾದ ಚಿತ್ರಗಳನ್ನು ಸಿದ್ದಪಡಿಸುವುದು ಕಷ್ಟದ ಕೆಲಸ. ಆದರೆ ಈಗಿನ ನುಡಿ ಫಾಂಟ್ ಗಳು ಮುಂಚೆ ಇದ್ದ ನುಡಿ ಫಾಂಟ್ ಗಳಲ್ಲಿನ ಆಕೃತಿಯಂತೆಯೇ ಕಾಣುಸುತ್ತಿದೆ, ಇದ್ದ ನುಡಿ ಫಾಂಟ್ ಗಳಿಗೆ ಯುನಿಕೋಡ್ ನಿಯಮಗಳನ್ನು ಹಾಕಿಕೊಡಲು ೧೮ ಲಕ್ಷವೇ?
ಕೊ.ಕೊ: ನುಡಿ ASCII ಯಲ್ಲಿ 28 ಫಾಂಟ್‍ಗಳು ಸಿಕ್ಕವು. ಚಿತ್ರಗಳು ಇಲ್ಲಿವೆ ನೋಡಿ.
About Aravinda Vishwanathapura
Co-Founder & CTO at Kadalu Technologies, Creator of Sanka, Creator of Chitra, GlusterFS core team member, Maintainer of Kadalu Storage