ನೆಮ್ಮದಿ

ಆಫೀಸಿನಿಂದ ಮನೆಗೆ ಬಂದ ಮೇಲೆ ರಾತ್ರಿ ಬಹಳ ಸಮಯದವರೆಗೂ ನನ್ನ ವೆಬ್ ಸೈಟ್ ಕೆಲಸ ಮಾಡುತ್ತಾ ಇದ್ದೆ. ಕೊನೆಗೂ ಅದು ಒಂದು ಹಂತಕ್ಕೆ ತಲುಪಿದ್ದು ಮೊದಲ ಆವೃತ್ತಿ ಬಿಡುಗಡೆಗೊಂಡಿದೆ. ಹಾಗಾಗಿ ಇವತ್ತು ಮನೆಗೆ ಬಂದಾಗ ಮಾಡಲು ಏನೂ ಕೆಲಸ ಇಲ್ಲ ಅಂತ ಅನ್ನಿಸುತ್ತಿತ್ತು, ಏನೋ ಕಳೆದು ಕೊಂಡಂತಹ ಅನುಭವ, ಜೊತೇಗೆ ನಂದೂ ಒಂದು ವೆಬ್ ಸೈಟ್ ಆಯ್ತು ಅಂತ ಖುಷಿನೂ ಆಗ್ತಿತ್ತು.

ಇವತ್ತು ಬಹಳ ದಿನಗಳ ಬಳಿಕ ವ್ಯಾಯಾಮ ಮಾಡಿದೆ, ತಂದು ಓದದೇ ಇಟ್ಟಿದ್ದ ಪೂರ್ಣಚಂದ್ರ ತೇಜಸ್ವಿಯವರ "ಪಾಕಕ್ರಾಂತಿ ಮತ್ತು ಇತರ ಕಥೆಗಳು" ಸಲ್ಪ ಓದಿದೆ. ಬಹಳ ದಿನಗಳ ನಂತರ ಗೆಳೆಯನ ಜೊತೆ ಫೋನಿನಲ್ಲಿ ಮಾತಾಡಿದೆ.

ಆಮೇಲೆ ಊಟ ಮಾಡಿ ಬಂದು ಹಾಗೇ ನನ್ನ ಐಡಿಯಾಗಳ ಪುಸ್ತಕ (ನನಗೆ ಹೊಳೆದ ಐಡಿಯಾಗಳು, ಮಾಡಬೇಕಾದ ಕೆಲಸಗಳನ್ನು ಬರೆದಿಟ್ಟುಕೊಂಡ ಪುಸ್ತಕ :) ) ನೋಡುತ್ತಿರುವಾಗ, ಅದರ ಒಂದು ಪುಟದಲ್ಲಿ ಮಾಡದೇ ಉಳಿದ ಕೆಲಸಗಳ ಪಟ್ಟಿ ೨೫ಕ್ಕೂ ಹೆಚ್ಚು ಇರುವುದನ್ನು ನೋಡುತ್ತಾ ಹಂಗೇ ನಿದ್ರೆ ಹೋದೆ.

Comments !