ARAVINDA VK

ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ

Feb 9, 2013
1 minute read.
experiment movie kannada lucia kannadablog

ಚಲನ ಚಿತ್ರ ರಂಗದಲ್ಲಿ ಕನ್ನಡದ ಹೊಸ ಪ್ರಯೋಗ "ಲೂಸಿಯ" ಬಗ್ಗೆ ಬರೆಯೋಣವೆನಿಸಿತು, ಇದೇನ್ ಇವ ಚಿತ್ರ ರಿಲೀಸ್ ಆಗಕ್ಕೂ ಮುಂಚೆನೇ ರಿವೀವ್ ಬರೀತಿದಾನಾ ಅಂತ ಅಂದ್ಕೊಬೇಡಿ. ನಂಗೆ ರಿವೀವ್ ಗಿವೀವ್ ಬರ್ಯಕ್ಕೆ ಬರಲ್ಲ :)

"Blind Date with lucia" ಅಂತ ಒಂದು ಕಿರು ಚಿತ್ರ ನೋಡಿದ್ದೆ ಬಹಳ ಮುಂಚೆ. ಆಮೇಲೆ ಏನಿದು/ಯಾರಿದು ಲೂಸಿಯಾ ಅಂತ ಹುಡುಕುತ್ತಾ ಹೋದಾಗ ಪವನ್ ಅವರ ಹೊಸ ಪ್ರಯೋಗದ ಬಗ್ಗೆ ತಿಳೀತು. ಅದುವರೆಗೆ ಅವರನ್ನು ಸುಮಾರು ಮೂವಿಗಳಲ್ಲಿ ನೋಡಿದ್ದರೂ ಅವರ ಬಗ್ಗೆ ತಿಳಿದಿರಲಿಲ್ಲ ಅಥವಾ ಗಮನಿಸಿರಲಿಲ್ಲ :) ಒಂದು ಕನ್ನಡ ಚಲನ ಚಿತ್ರ ಮಾಡಲು ಬಹಳಷ್ಟು ಜನ ಪ್ರೇಕ್ಷಕರೇ ಸಹಾಯ ಮಾಡ್ತಾ ಇದಾರಂತೆ ಅಂತ ಕೇಳಿನೇ ಒಂತರಾ ಥ್ರಿಲ್ ಆಗಿತ್ತು.

ಅದಾದ್ಮೇಲೆ ಚಿತ್ರ ಮಾಡುವಾಗಿನ ಅವರ ಅನುಭವಗಳನ್ನು ಹಂಚಿಕೊಳ್ಳುವ ರೀತಿ ಅವರ ಪ್ರಯೋಗಗಳನ್ನು ನೋಡುತ್ತಾ ನೋಡುತ್ತಾ ಅವರ ಮೇಲಿನ ಅಭಿಮಾನ ಜಾಸ್ತಿ ಆಯಿತು. ಅಲ್ಲಿ ಅವರು ಹಾಕುತ್ತಿದ್ದ ತಂಡದ ಫೋಟೋಗಳಿಗೂ ಬರೆಯುತ್ತಿದ್ದ ಅನುಭವಗಳಿಗೂ ಲೈಕ್ ಒತ್ತಿ "ಲೂಸಿಯಾ" ಚಿತ್ರಕ್ಕೆ ಕಾದು ಕುಳಿತಿದ್ದಾಯ್ತು. ಈಗ ಟ್ರೈಲರ್ ಬಂದಿದೆ ಇನ್ನೇನು ಚಿತ್ರವೂ ಬರುತ್ತೆ.

ಶುಭಾಶಯಗಳು ಪವನ್. ನಿಮ್ಮ ಈ ಪ್ರಯತ್ನ ಯಶಸ್ವಿಯಾಗಲಿ.

ಅಂದ ಹಾಗೆ ಈ ಬ್ಲಾಗ್‍ನ ಟೈಟಲ್ ಯಾಕೆ ಹಿಂಗಿದೆ ಅಂದ್ರಾ? ಟ್ರೈಲರ್ ನೋಡಿದ್ರೆ ನಿಮ್ಗೇ ಅರ್ಥ ಆಗಿರುತ್ತೆ ಇಲ್ಲಾ ಅಂದ್ರೆ ಈ ಟ್ರೈಲರ್ ನೋಡಿ :)

ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಬೇಕೆನಿಸಿದಲ್ಲಿ

ನಾನಂತೂ ಚಿತ್ರ ಬಿಡುಗಡೆಗೆ ಕಾಯುತ್ತಾ ಇದ್ದೇನೆ, ನೀವು?

About Aravinda VK

Partner at Kadalu Investments, Creator of Sanka, Creator of Chitra, GlusterFS core team member, Maintainer of Kadalu Storage
Contact: Linkedin | Twitter | Facebook | Github | mail@aravindavk.in