ನನ್ನ ಕ್ಯಾಮೆರಾ(ಗಳು)!

ನನ್ನ ಮುದ್ದಿನ ಮೊದಲ ಕ್ಯಾಮೆರಾ Canon A410, ಸಣ್ಣ ಕ್ಯಾಮೆರಾ ಆರಾಮಾಗಿ ಜೇಬಿನಲ್ಲಿಟ್ಟುಕೊಂಡು ಹೋಗುತ್ತಿದ್ದೆ. ಅದರಲ್ಲಿದ್ದ options ಗಳನ್ನೆಲ್ಲಾ ಪ್ರಯೋಗ ಮಾಡಿ ಅದರಲ್ಲಿರುವುದು ಸಾಕಾಗೋದಿಲ್ಲವೆನಿಸಿತು.

ಇನ್ನು ಹೆಚ್ಚಿನ controls ಬೇಕೆನಿಸಿತ್ತು, ಹಾಗೇ SLR ಕ್ಯಾಮೆರಾ ತಗೋಳೋದೂ ಕಷ್ಟ ಅನ್ನಿಸಿತ್ತು. ಕೊನೆಗೂ ಬಹಳ ಯೋಚಿಸಿ ಅಮೇರಿಕ ಇಂದ ಬರುವವಳಿದ್ದ ಗೆಳತಿಯೊಬ್ಬಳಿಂದ Canon SX10IS ಕ್ಯಾಮೆರಾ ತರಿಸಿಕೊಂಡೆ. ಅದು SLR ಕ್ಯಾಮೆರಾ ಅಲ್ಲದಿದ್ದರೂ ಸೂಪರ್ ಜೂಮ್ ಕ್ಯಾಮೆರಾ! 20x ಜೂಮ್ ಇತ್ತು ಅದರಲ್ಲಿ :)

Canon SX10IS

Canon SX10IS

ಹೊಸ ಕ್ಯಾಮೆರಾದಲ್ಲಿ ಲೆಖ್ಖವಿಲ್ಲದಷ್ಟು ಫೋಟೋಗಳನ್ನು ತೆಗೆದಿದ್ದಾಯ್ತು. ಆದರೆ ದಿನದಿಂದ ದಿನಕ್ಕೆ ಫೋಟೋಗ್ರಫಿಯ ಹುಚ್ಚು ಬೆಳೆಯುತ್ತಾ ಹೋಯಿತು. ಕೊನೆಗೂ SLR ಕ್ಯಾಮೆರಾ ತಗೊಂಡೆ. :)

Nikon D90

Nikon D90

ಕ್ಯಾಮೆರಾಗಳೂ... ಫೋಟೋಗಳೂ...

ಕಲಿಯುವುದು ಬಹಳಷ್ಟಿದೆ!

Comments !