ಮರೆವು

ಕೆಲಸ ಮುಗಿಸಿ ಮನೆಗೆ ಹೊರಟಾಗ ರಾತ್ರಿ ಎಂಟು ಗಂಟೆ ಆಗಿತ್ತು. ಬೈಕ್ ಪಾರ್ಕಿಂಗ್ ಹತ್ರ ಬರುವಾಗ್ಲೇ ಎಲ್ಲಿ ನಿಲ್ಲಿಸಿದ್ದೆ ಅಂತ ಯೋಚ್ನೆ ಮಾಡುತ್ತಾ ಬಂದೆ. ಮೂರನೇ ಸಾಲಿನಲ್ಲಿ ಬೈಕ್ ಕಾಣಿಸಿತು, ಅದ್ರ ಹ್ಯಾಂಡಲ್ ಅಲ್ಲಿ ಹೆಲ್ಮೆಟ್! ಅಯ್ಯೋ ಯಾರೋ ತಗೊಂಡೋದ್ರಾ... ಹೆಲ್ಮೆಟ್ ಲಾಕ್ ಕಟ್ ಆಗಿದೆ ಅಂತ ಹ್ಯಾಂಡಲ್ ಅಲ್ಲೆ ಹಾಕಿ ಹೋಗಿದ್ದೆ, ಅಯ್ಯೋ ಇನ್ನು ಆಫೀಸ್ ಗೇಟ್ ವರೆಗೂ ತಳ್ಳಿಕೊಂಡು ಹೋಗ್ಬೇಕಲ್ಲಾ... ಅದೂ ಅಲ್ಲದೆ ನಾಳೆ ಬೈಕ್ ಹೊರಗೇ ಬಿಡಬೇಕಲ್ಲ ಅಂತ ಯೋಚನೆ ಆಯ್ತು(ನಮ್ಮ ಆಫೀಸಲ್ಲಿ ಹೆಲ್ಮೆಟ್ ಕಡ್ಡಾಯ). ಹತ್ತಿರ ಹೋಗಿ ನೋಡ್ತೀನಿ... ಅದು... ಅದು... ನನ್ನ ಬೈಕೇ ಅಲ್ಲ, ಹೆ ಹೆ ಅಂತ ನಕ್ಕು ಮತ್ತೆ ನನ್ನ ಬೈಕ್ ಎಲ್ಲಿ ನಿಲ್ಸಿದೀನಿ ಇವತ್ತು ಅಂತ ಹುಡುಕಿದೆ. ಎಲ್ಲೂ ಕಾಣಿಸ್ಲಿಲ್ಲ , ಅಷ್ಟರಲ್ಲಿ ನೆನಪಿಗೆ ಬಂತು ಬೆಳಗ್ಗೆ ಇಲ್ಲಿ ಪಾರ್ಕಿಂಗ್ ಜಾಗ ಇಲ್ಲಾಂತ ಇನ್ನೊಂದ್ಕಡೆ ನಿಲ್ಸಿದೀನಿ ಅಂತ :)

Comments !