ಕುಣಿಯೋದು ಬೇಡ!
Jan 18, 2023
1 minute read.
impana
kannada
ಅಲ್ಲೊಬ್ಬರು ತನ್ನ ಇಬ್ಬರು ಮೊಮ್ಮಕ್ಕಳ ಜೊತೆ ಬರ್ತಾ ಇದ್ರು. ಅದರಲ್ಲಿ ಒಂದು ಹುಡುಗಿ ಇಂಪನನ age ಅಷ್ಟೇ ಕಾಣ್ತಿದ್ಳು, ತುಂಬಾ decent ಆಗಿ ಬರ್ತಾ ಇದ್ಳು.
ಇಂಪನ ಅಲ್ಲೇ ಆಚೆ ಇದ್ದಳು, ಅವಳನ್ನು ಕರೆದು "ನೋಡು ಎಷ್ಟು decent ಆಗಿ ಬರ್ತಿದಾಳೆ ಅವಳು, ನಿನ್ನ ತರಹ ಕುಣ್ಕೊಂಡು ಚೇಷ್ಟೆ ಮಾಡ್ಕೊಂಡು ಬರ್ತಿಲ್ಲ ನೋಡು" ಅಂತ ಹೇಳೋಣ ಅಂತ ಅಂದುಕೊಂಡು "ಇಂಪನಾ ಬಾ ಇಲ್ಲಿ" ಅಂತ ಕರೆದೆ.
ಅಷ್ಟರಲ್ಲಿ ಆ ಹುಡುಗಿ ಅಜ್ಜಿ ಕೈ ಬಿಡಿಸಿಕೊಂಡು ಜಂಪ್ ಮಾಡಿ ಅಲ್ಲೇ ಸೈಡ್ ಅಲ್ಲಿ ಇದ್ದ ಕಟ್ಟೆಯನ್ನೂ ಹಾರಿ ಆಚೆ ಹೋದ್ಳು.
ಇಂಪನ ಡ್ಯಾನ್ಸ್ ಮಾಡ್ತಾ ಹೆಜ್ಜೆ ಹಾಕಿಕೊಂಡು ಬಂದು "ಏನಪ್ಪಾ ಕರೆದಿದ್ದು?" ಅಂದಳು.
ನಾನು "ಏನಿಲ್ಲ ಬಿಡು" ಎಂದು ಸುಮ್ಮನಾದೆ.
About Aravinda VK
Partner at Kadalu Investments, Creator of Sanka, Creator of Chitra, GlusterFS core team member, Maintainer of Kadalu Storage