ಕೊಳಲಿನ ಕತೆ

ತಂಜಾವೂರಿಗೆ ಹೋದಾಗ ಒಂದು ಕೊಳಲು ತಂದೆ, ಹಾಗೇ ದೀಪಾವಳಿ ಹಬ್ಬಕ್ಕೆ ಊರಿಗೆ ಹೋದಾಗ ಅಭ್ಯಾಸ ಮಾಡೋಣ/ಮನೆಯಲ್ಲಿ ತೋರಿಸೋಣ ಅಂತ ತೆಗೆದುಕೊಂಡು ಹೋಗಿದ್ದೆ.

ಕೊಳಲು ಊದುತ್ತಾ ಜಗುಲಿಯಲ್ಲಿ ಕೂತಿದ್ದೆ, ಅಷ್ಟೊತ್ತಿಗೆ ಒಳಗಿನಿಂದ ಅಕ್ಕ ಬಂದಳು.

"ಗೇಟು/ಬಾಗಿಲು ಭದ್ರ ಮಾಡಿ ಇಟ್ಟುಕೊಳ್ಳೇ... ನಾನು ಕೊಳಲು ಊದುವುದನ್ನು ಕೇಳಿ ದನಗಳು ಬರಬಹುದು, ಕೃಷ್ಣನ ಸುತ್ತ ಗೋವುಗಳು ಬಂದಂಗೆ." ಎಂದೆ ಅದಕ್ಕೆ ಅವಳು "ಅಷ್ಟೆಲ್ಲಾ ಬೇಡಾ... ಅಲ್ಲೇ ಅಂಗಳದಲ್ಲಿ ಮೇಯ್ತಾ ಇದ್ಯಲ್ಲ, ಆ ಕರು ಬರ್ಲಿ ಮೊದ್ಲು " ಅಂದಳು.

ಹಂಗಾ ನೋಡೇ ಬಿಡೋಣ ಅಂತ ಕೊಳಲೂದುವುದನ್ನು ಮುಂದುವರಿಸಿದೆ, ಆ ಕರು ತಲೆ ಎತ್ತಿ ನೋಡಲೂ ಇಲ್ಲ.

ಛೇ! ಈಗಿನ ಕಾಲದ ಕರುಗಳಿಗೆ ಸಂಗೀತ ಜ್ಞಾನನೇ ಇಲ್ಲ ಎಂದು ಒಳಗೆ ನಡೆದೆ.

Comments !