ಇಂಪನಳ ರಾಣಿ ಸ್ಟೈಲು

ಇಂಪನ ಅಮ್ಮನ ದುಪ್ಪಟ್ಟಾವನ್ನು ಉದ್ದಕ್ಕೆ ಹೊದ್ದುಕೊಂಡು ಬಂದಳು. ನೋಡಿದ ತಕ್ಷಣ ಗೊತ್ತಾಯ್ತು, ಈಗ ನೋಡುತ್ತಿರುವ ಮಹಾಭಾರತದ ಪ್ರಭಾವ ಎಂದು.

"ಇಂಪೂ... ನೋಡು ಹಿಂಗೆ ಉದ್ದಕ್ಕೆ ಹಾಕಿಕೊಂಡು ಬರಬಾರದು, ಎಲ್ಲಿಗಾದರೂ ಸಿಕ್ಕಿಹಾಕಿಕೊಂಡರೆ.. ಅಥ್ವಾ ನೀನೇ ತುಳ್ಕೊಂಡ್ರೆ ಅಬ್ಬು ಆಗುತ್ತೆ ಅಲ್ವಾ?"

Impana Duppatta

ಸುಮ್ಮನೆ ಹೂ ಅಂತ ತಲೆ ಅಲ್ಲಾಡಿಸಿದ್ಳು.. ಇನ್ನೂ ಸರಿಯಾಗಿ ಅರ್ಥ ಆಗಿಲ್ಲ ಅನ್ನಿಸ್ತು. ಮತ್ತೆ ಹೇಳಿದೆ..

"ನೋಡು ಪುಟ್ಟಾ.. TVಲಿ act ಮಾಡೋರಿಗೆ ಕ್ಯಾಮೆರಾ ಮೆನ್ ಮತ್ತೆ ಬೇರೆಯವ್ರೂ ಎಲ್ಲಾ ಇರ್ತಾರೆ, ಅವ್ರೆಲ್ಲಾ ಹೇಳ್ತಾರೆ ನಡೀವಾಗ ಏನಾದರೂ ಸಿಕ್ಕಿ ಹಾಕಿಕೊಂಡರೆ. ಅದೂ ಅಲ್ಲದೇ ರಾಣಿ ಅಂತಾದ್ರೆ ಹಿಂದೆನೇ ಒಬ್ರು ಇರ್ತಾರೆ ರಾಣಿಗೆ ಹೆಲ್ಪ್ ಮಾಡಕ್ಕೆ ಗೊತ್ತಾ?"

"ಅಪ್ಪಾ ಹಂಗಾದ್ರೆ ಬಾ ನನ್ನ ಹಿಂದೆ"

"!!!"

ಆಚೆ ಒಳಗೆ ಚಿನ್ಮಯಿ ಕಿಸಕ್ಕನೆ ನಕ್ಕಿದ್ದು ಕೇಳಿಲ್ಲದಂತೆ ಈಚೆಗೆ ಬಂದೆ.

Comments !