ಇಂಪನಳ ಆನ್ ಲೈನ್ ಕ್ಲಾಸ್

ಆನ್ಲೈನ್ ಕ್ಲಾಸ್ ಏನು ಎಂದು ಅರ್ಥವಾಗುವುದಕ್ಕೆ ಸಲ್ಪ ಸಮಯ ಹಿಡಿಯಿತು ಇಂಪನಂಗೆ. ಆರಂಭದಲ್ಲಿ ಮೇಡಮ್ ಕೇಳಿದ ಪ್ರಶ್ನೆಗೆ ನನ್ನ ಅಥವಾ ಚಿನ್ಮಯಿ ಮುಖ ನೋಡುತ್ತಿದ್ದಳು. ದಿನ ಕಳೆದಂತೆ ಆನ್ಲೈನ್ ಕ್ಲಾಸ್ ಹಾಗೂ ಸಲ್ಪ ಸಲ್ಪ ಇಂಗ್ಲೀಷ್ ಅರ್ಥವಾಗುತ್ತಾ ಹೋಯಿತು.

ಹಂಗೇ ಒಂದಿನ, ಮೇಡಮ್ ಏನೋ ಪ್ರಶ್ನೆ ಕೇಳಿದರು ಇಂಗ್ಲಿಷ್ ಅಲ್ಲಿ..

"ಯಾರು ಯಾರು ಲೆಟರ್ಸ್ A-E ಪ್ರಾಕ್ಟೀಸ್ ಮಾಡಿದೀರಾ? Thumbs up ಮಾಡಿ"

ಇಂಪನ ಫುಲ್ ಜೋಶ್ ಅಲ್ಲಿ Thumbs up ಮಾಡಿದ್ಲು.

Impana

ನಾನು ಮನಸಲ್ಲೇ ಅಂದುಕೊಂಡೆ, "ಸೂಪರ್ ಅಲಾ.. ಇಂಪನ ಇಷ್ಟು ಫಾಸ್ಟ್ ಆಗಿ ಇಂಗ್ಲಿಷ್ ಅಲ್ಲಿ ಹೇಳಿದ್ದನ್ನು ಅರ್ಥ ಮಾಡಿಕೊಂಡಳಾ" ಅಂತ ಇಂಪನನ ಮುಖ ನೋಡಿದೆ.

ಅಷ್ಟರಲ್ಲೇ ಇಂಪನ ಮ್ಯೂಟ್ ಮಾಡಿಕೊಂಡು, ನನ್ನನ್ನ ಕೇಳಿದಳು..

"ಏನಂತೆ ಅಪ್ಪಾ?.."

Comments !