ಇಂಪನ ಕೋಣೆ ದೇವರ ಕೋಣೆ

ಇಂಪನ ಕೆಲವೊಂದ್ಸಲ ದಡ್ಡಿ ಥರ ಮಾಡಿದಾಗ, ಇಂಪನ ಕೋಣೆ ಅಂತಿದ್ದೆ. ಹಾಗಾಗಿ ಕೋಣೆ ಅಂದ್ರೆ ರೂಮ್ ಅನ್ನೋ ಇನ್ನೊಂದು ಅರ್ಥ ಇದೆ ಅಂತ ಅವಳಿಗೆ ಗೊತ್ತಿರಲಿಲ್ಲ.

ಹಾಗೇ ಒಂದ್ಸಲ ಮಾತಾಡುವಾಗ ದೇವರ ಕೋಣೆಲಿ ಇದೆ ನೋಡು ಅಂದೆ. ಇಂಪನಂಗೆ confuse ಆಯ್ತು.

"ಅಮ್ಮಾ ನೋಡಮ್ಮಾ ಅಪ್ಪ ದೇವ್ರಿಗೆ ಕೋಣೆ ಅಂತಿದಾರೆ.."

ಅವತ್ತಿಂದ ನಮ್ಮನೇಲಿ ದೇವರ ಕೋಣೆ ಇಂಪನ ಕೋಣೆ ಅಂತ ಫೇಮಸ್ ಆಯ್ತು.

***

ಇಂಪನನ ಭಾಷೆಯಲ್ಲಿ ಹಿಂಗೇ ಕೆಲವೊಂದಷ್ಟು ಪದಗಳಿವೆ..

"ಚಿತ್ರಾನ್ನ" (ಅಪ್ಪಾ ಚಿತ್ರಾನ್ನ ಬರೆಯೋ..)

"ಅಪ್ಪಾನೆ ಅಮ್ಮಾನೆ" (ಅಪ್ಪಾನೇ ಹೇಳಿದ್ದು.. ಅಥವಾ ಅಮ್ಮಾನೇ ಬರಬೇಕು)

"ಅಪ್ಪ ಬೆಕ್ಕು ಅಮ್ಮ ಬೆಕ್ಕು" (ಅಪ್ಪ ಬೇಕು.. ಅಮ್ಮ ಬೇಕು)

Comments !