ಇಂಪನ ಮತ್ತು ಮನೆ ಕ್ಲೀನ್

ಒಂದಿನ ಮನೆ ಗುಡಿಸಿ ಕ್ಲೀನ್ ಮಾಡ್ತಿದ್ದೆ. ಎಲ್ಲಾ ಕಡೆ ಇಂಪನ ಕಲರ್ ಪೆನ್ಸಿಲ್ ಹರಡಿಟ್ಟಿದ್ದಳು.

"ಇಂಪನಾ.. ನೋಡು ಎಲ್ಲಾ ಕಡೆ ಪೆನ್ಸಿಲ್ ಹರಡಿಟ್ಟಿದೀಯ, ಎಲ್ಲಾ ರೂಮಲ್ಲೂ ಎರಡೆರಡು ಪೆನ್ಸಿಲ್ ಇದೆ ನೋಡು" ಎಂದೆ.

ಸಲ್ಪ ಹೊತ್ತು ಏನೂ ಸದ್ದಿರಲಿಲ್ಲ. ಆಮೇಲೆ ನಾನು ಆಫೀಸ್ ರೂಮಲ್ಲಿ ಕೂತಿದ್ದಾಗ ಬಂದಳು..

"ಅಪ್ಪಾ.."

"ಎಲ್ಲಾ ರೂಮಲ್ಲೂ ಎರಡೆರಡು ಪೆನ್ಸಿಲ್ ಇದೆ ಅಂದ್ಯಲ್ವಾ.. ಈ ರೂಮಲ್ಲಿ ಎಲ್ಲಿದೆ?" ಅಂತ ಕೇಳಿದ್ಳು ಸೊಂಟದ ಮೇಲೆ ಕೈ ಇಟ್ಟುಕೊಂಡು.

Impana

ಎಲ್ಲಾ ರೂಮಲ್ಲೂ ಇದೆ, ಈ ರೂಮಲ್ಲಿ ಒಂದು ಇಟ್ಟಿಲ್ಲ ನೋಡು ಅಂತ ಹೇಳಿ ಕಳುಹಿಸಿದೆ.

ಈಗಿನ ಕಾಲದ ಮಕ್ಕಳ ಹತ್ರ ಹುಷಾರಾಗಿರ್ಬೇಕಪ್ಪಾ!

Comments !