ಇಂಪನ ಮತ್ತು Sloth

"ಅಪ್ಪಾ.. Sloth ಏನಕ್ಕೆ ಇಷ್ಟು ಸ್ಲೋ?"

Zootopia ಮೂವಿ ನೋಡಿ ಆದ್ಮೇಲೆ ಇಂಪನಂಗೆ ಈ ಡೌಟ್ ಬಂತು.

"ಅದೂ.. Sloth ಸಲ್ಪನೇ ತಿನ್ನುತ್ತೆ, ಬೇಗ ಬೇಗ ಕೆಲಸ ಮಾಡಿದ್ರೆ ಬೇಗ ಶಕ್ತಿ ಖಾಲಿ ಆಗುತ್ತಲ್ವಾ.. ಅದಕ್ಕೆ ನಿಧಾನಕ್ಕೆ ಕೆಲಸ ಮಾಡುತ್ತೆ."

ಅರ್ಥ ಆಗ್ಲಿಲ್ಲ ಅವ್ಳಿಗೆ!

"ಅಪ್ಪಾ.. ಶಕ್ತಿ ಖಾಲಿ ಆಗ್ಬಾರ್ದೂ ಅಂತ ನಿಧಾನಕ್ಕೆ ಏನಕ್ಕೆ ಕೆಲ್ಸ ಮಾಡ್ಬೇಕೂ?.."

ಸಲ್ಪ ಯೋಚನೆ ಮಾಡಿ..

"ಈಗ ನೀನು Masha and the Bear ನೋಡುವಾಗ, ಹಾಲು ಕುಡಿದಾಗುವವರೆಗೂ ನೋಡು ಆಮೇಲೆ TV off ಮಾಡ್ಬೇಕು ಅಂದಾಗ, ನಿಧಾನ ಕುಡೀತೀಯಲ್ವಾ.. ಹಂಗೆ"

"..."

ಈಸಲ ಅಪ್ಪ Rocks!

Comments !