ARAVINDA VISHWANATHAPURA

ಇಂಪನ

May 19, 2015
1 minute read.
ಕನ್ನಡ ಇಂಪನ ಮಗಳು

ಆ ದಿನ ಇನ್ನೂ ನೆನಪಿದೆ…​ ನಾನು ಮತ್ತೆ ಚಿನ್ಮಯಿ ಡಾಕ್ಟರ್ ಬಳಿ ಹೋದಾಗ, ಈಗ scaning ಬೇಡ ಇನ್ನೂ ಸಲ್ಪ ದಿನ ಬಿಟ್ಟು ಮಾಡಿಸಿ, ಈಗಿನ್ನೂ Heart beat ಶುರುವಾಗಿದೆ ಅಷ್ಟೆ. ಈಗಲೇ scaning ಅಲ್ಲಿ ಏನೂ ಗೊತ್ತಾಗಲ್ಲ ಅಂದರು. ಅದನ್ನು ಕೇಳಿ ಇಬ್ಬರಿಗೂ ಏನೋ ಒಂತರಾ ರೋಮಾಂಚನ, ಖುಷಿ, ಗೊಂದಲ, ಟೆನ್ಷನ್ ಎಲ್ಲಾ ಒಟ್ಟೊಟ್ಟಿಗೆ. ಮಗುವೊಂದೇ ಹುಟ್ಟೋದಿಲ್ಲ, ಜೊತೆಗೆ ಅಮ್ಮ, ಅಪ್ಪನೂ ಹುಟ್ಟುತ್ತಾರೆ…​ :)

ಏನೇನು ತಿನ್ನಬಹುದು?, ಹೇಗಿರಬೇಕು? ವಾಕಿಂಗ್ ಮಾಡ್ಬೇಕಾ ಬೇಡ್ವಾ, ಟ್ರಾವೆಲ್ ಮಾಡ್ಬೋದಾ? ಬಹಳಷ್ಟು ಪ್ರಶ್ನೆಗಳು, ಕೆಲವೊಂದಷ್ಟಕ್ಕೆ ಡಾಕ್ಟರ್ ಇಂದ ಉತ್ತರ ಸಿಕ್ಕರೆ, ಇನ್ನು ಕೆಲವೊಂದಷ್ಟಕ್ಕೆ ಮನೆಯವರಿಂದ, ಸ್ನೇಹಿತರಿಂದ ಉತ್ತರಗಳು. ಕೆಲವೊಮ್ಮೆ ಸಲಹೆಗಳಿಂದ ಟೆನ್ಷನ್ ಜಾಸ್ತಿಯಾಗಿದ್ದೂ ಇದೆ :)

ಬೆಂಗಳೂರಿನಲ್ಲಿ ಡಾಕ್ಟರ್ ಹುಡುಕುವುದು ಸುಲಭದ ಕೆಲಸವೇನಲ್ಲ, ಇಂಟರ್ನೆಟ್ ನಲ್ಲಿ ಹುಡುಕಿ, ತ್ಯಾಗರಾಜನಗರದಲ್ಲಿ ಒಂದು ಕ್ಲಿನಿಕ್ ಗೆ ಹೋದೆವು. ಸುಮಾರು ಔಷದಿಗಳನ್ನು ಕೊಟ್ಟಾಗ ಇಷ್ಟೆಲ್ಲಾ ತಿನ್ಬೇಕಾ ಅಂತ ತಲೆಬಿಸಿ.

ಮನಸ್ಸಿನಲ್ಲಿ ಏನೇನೋ ಆಲೋಚನೆಗಳು, ಹೆದರಿಕೆ, ಖುಷಿ ಎಲ್ಲವೂ. ಚಿನ್ಮಯಿ ಮನೆಯಿಂದ ಆಸ್ಪತ್ರೆಗೆ ಹೋಗಲು ಸುಮಾರು ದೂರ ಆಗುತ್ತೆ, ಸರಿಯಾದ ಸಮಯದಲ್ಲಿ vehicle ಸಿಗುತ್ತೋ ಇಲ್ಲವೋ, ನಾನು ಮುಂಚಿತವಾಗಿ ಬೆಂಗಳೂರಿನಿಂದ ಅಲ್ಲಿಗೆ ಹೋಗಲು ಸಾಧ್ಯವಾಗುತ್ತೋ ಇಲ್ಲವೋ ಅಂತೆಲ್ಲಾ ಯೋಚನೆಗಳು. ಹತ್ತಿರದಲ್ಲಿ ಇದ್ದ ಡಾಕ್ಟರ್ ಬಗ್ಗೆ ಒಳ್ಳೆ ಅಭಿಪ್ರಾಯವಿರಲಿಲ್ಲ ಹಾಗಾಗಿ ಮತ್ತೂ ಟೆನ್ಷನ್.

ಪ್ರೇಮಿಗಳ ದಿನದಂದು ನಮಗೆ ಮಗಳು ಹುಟ್ಟಿದ್ದಾಳೆ, ಇದೀಗ ಮೂರು ತಿಂಗಳಾಯಿತು. ಇಂಪನ ಎಂದು ಹೆಸರಿಟ್ಟಿದ್ದೇವೆ. ಮಗಳ ಹೆಸರು ಹುಡುಕಿದ ಕಥೆ ಬಗ್ಗೆ ಚಿನ್ಮಯಿ ಬರೀತೀನಿ ಅಂದಿದಾಳೆ, ಸದ್ಯದಲ್ಲೇ ನಿರೀಕ್ಷಿಸಿ :)

About Aravinda Vishwanathapura

Co-Founder & CTO at Kadalu Technologies, Creator of Sanka, Creator of Chitra, GlusterFS core team member, Maintainer of Kadalu Storage
Contact: Linkedin | Twitter | Facebook | Github | mail@aravindavk.in