ಐಡಿ ಕಾರ್ಡು

"ಅಪ್ಪಾ ನಂಗೊಂದು ಐಡಿ ಕಾರ್ಡು ಬೇಕು" ಅಂದಳು ಇಂಪನ

ಸಣ್ಣದೊಂದು ಪೇಪರ್ ಕಟ್ ಮಾಡಿ ಅವಳ ಹೆಸರು ಬರೆದು ಐಡಿ ಕಾರ್ಡ್ ಮಾಡಿ ಕೊಟ್ಟೆ.

ಪುಟ್ಟಿಯ ಐಡಿ ಕಾರ್ಡ್

ಸಲ್ಪ ಹೊತ್ತು ಆಟ ಮುಂದುವರೆದಿತ್ತು, ಆಮೇಲೆ ಮತ್ತೆ ಬಂದಳು..

"ಅಪ್ಪಾ ನಿಂಗೂ ಐಡಿ ಕಾರ್ಡ್ ಮಾಡಿ ಕೊಡ್ಲಾ.."

ಆಯ್ತು ಅಂದೆ, ಇಂಗ್ಲಿಷ್ ಅಲ್ಲಿ ನನ್ನ ಹೆಸರು ಬರೆಯೋಕೆ ಮೊದಲ ಎರಡು ಅಕ್ಷರ ಗೊತ್ತಿತ್ತು ಅವಳಿಗೆ, ಬರೆದು ಆದ ಮೇಲೆ ಕೇಳಿದಳು..

"ಅಪ್ಪಾ A R ಆದ್ಮೇಲೆ.."

ಮುಂದಿನ ಅಕ್ಷರ ಹೇಳೋಕೆ ಮುಂಚೆ ಏನು ಬರೆದಿದಾಳೆ ಅಂತ ನೋಡಿದೆ, ನಂಗೊಂದು ಆಶ್ಚರ್ಯ ಕಾದಿತ್ತು.. ಬರೆಯೋದಕ್ಕೆ ಅವಳು ಬಲಗಡೆಯಿಂದ ಶುರು ಮಾಡಿದ್ಳು, ಅದಕ್ಕೆ ಸರಿಯಾಗಿ ಅಕ್ಷರವನ್ನೂ ತಿರುಗಿಸಿದ್ದಳು. ಇನ್ನೂ ಹೇಗೆ ಬರೆಯುತ್ತಾಳೆ ಅಂತ ಮುಂದಿನ ಅಕ್ಷರಗಳನ್ನ ಹೇಳಿದೆ. ಹೆಸರನ್ನೂ ಬರೆದು ಜೊತೆಗೆ ಫೋಟೋನೂ ರೆಡಿ ಮಾಡಿ ಕೊಟ್ಟಳು.

ನನ್ನ ಐಡಿ ಕಾರ್ಡ್

Comments !