ಐಡಿ ಕಾರ್ಡು ಏನಕ್ಕೆ ಬೇಕು?

ಹಂಗೇ ಆಟ ಆಡ್ತಿದ್ದಾಗ ಇಂಪನಂಗೆ ಒಂದು ಪ್ರಶ್ನೆ ಬಂತು!

"ಅಪ್ಪಾ, ಐಡಿ ಕಾರ್ಡ್ ಏನಕ್ಕೆ ಬೇಕು?"

ಹೆಂಗಪ್ಪಾ ಇವಳಿಗೆ ಅರ್ಥ ಆಗೋ ಹಂಗೆ ಹೇಳೋದು ಅಂತ ಯೋಚಿಸ್ಕೊಂಡು, ಹೇಳಿದೆ..

"ಐಡಿ ಕಾರ್ಡ್ ಹಾಕಿಕೊಂಡ್ರೆ ನೀನೆ ಇಂಪನ ಅಂತ ಗೊತ್ತಾಗುತ್ತೆ ಮ್ಯಾಮ್ ಗೆ"

"ಅಪ್ಪಾ... ಅವರು ಹೋಮ್ ವರ್ಕ್ ಕೊಡುವಾಗ ಇಂಪನಾ ಅಂತ ಕರೆದು ಕೊಡ್ತಾರೆ, ಮ್ಯಾಮ್ ಗೆ ನನ್ನ ಹೆಸರು ಗೊತ್ತು ಅಪ್ಪಾ.."

ಮತ್ತೆ ಬೇರೆ ಉತ್ತರ ಯೋಚಿಸ್ತಿದ್ದೆ..

"ನೀನು ಹೊರಗಡೆ ಹೋದಾಗ, ನೀನು Kidzee ಹುಡುಗಿ ಅಂತ ಬೇರೆಯವರಿಗೆ ಗೊತ್ತಾಗಬೇಕಲ್ವಾ?"

"ಅಪ್ಪಾ... ಸ್ಕೂಲ್ ಮುಗಿದಾದ್ಮೇಲೆ ನೀನು, ಅಮ್ಮ ಮನೆಗೆ ಕರ್ಕೊಂಡು ಹೋಗ್ತೀರಲ್ವಾ, ನಾನೆಲ್ಲಿ ಹೊರಗಡೆ ಹೋಗ್ತೀನಿ?"

ನಂಗೆ ತಕ್ಷಣಕ್ಕೆ ಬೇರೆ ಏನೂ ಹೊಳೀಲಿಲ್ಲ..

"ಸರಿ ಹೋಗ್ಲಿ ಬಿಡು.. ನೀನೇ ಹೇಳು ಐಡಿ ಕಾರ್ಡ್ ಏನಕ್ಕೆ ಬೇಕು?"

"ಅದೂ... ಸ್ಕೂಲಲ್ಲಿ ನಾನು ಮತ್ತೆ ಆರಾಧ್ಯ ಐಡಿ ಕಾರ್ಡಲ್ಲಿ ಫೋನ್ ಆಟ ಆಡ್ಬೋದು ಗೊತ್ತಾ?"

"..."

Comments !