ಹಾಸ್ಟೆಲ್ ನೆನಪು - ಫೋನ್

ಆಗ ಹಾಸ್ಟೆಲ್ ಅಲ್ಲಿ ಯಾರ ಬಳಿಯೂ ಮೊಬೈಲ್ ಇರ್ಲಿಲ್ಲ, ಕರೆ ಬಂದ್ರೆ ಫೋನ್ ಬಳಿ ಇದ್ದ ಯಾರಾದರೂ ಫೋನ್ ರಿಸೀವ್ ಮಾಡಿ ಯಾರಿಗೆ ಬಂದಿರುತ್ತೋ ಅವರ ಹೆಸ್ರು ಕೂಗಬೇಕಿತ್ತು... ನಮ್ಮ ರೂಮಿನ ಹತ್ತಿರನೇ ಫೋನ್ ಇದ್ದಿದ್ದರಿಂದ ನಾನೇ ಸುಮಾರು ಸಲ ರಿಸೀವ್ ಮಾಡ್ತಾ ಇದ್ದೆ. ಕರೆ ಬಂದಾಗ ಅವ್ರನ್ನ ಜೋರಾಗಿ ಕಿರುಚಿ ಕರೆಯೋದೇ ಒಂತರಾ ಮಜ, ಅವರಿಲ್ಲದಿದ್ರೆ ಏನಾದ್ರೂ ಹೇಳ್ಬೇಕಿತ್ತಾ ಅಂತ ಕೇಳಿ ಬರ್ದಿಟ್ಟುಕೊಳ್ಳೋದು. ನಮಗೆ ಆಗದವರಿಗೆ ಯಾರಾದ್ರು ಕಾಲ್ ಮಾಡಿದಾಗ ಮೂರು ಸಲ ಕೂಗ್ತಾ ಇದ್ವಿ, ಮೂರು ಸಲಕ್ಕೂ ಓ ಅನ್ಲಿಲ್ಲ ಅಂದ್ರೆ ಅವ್ನಿಲ್ಲ ಅಂತ ಫೋನ್ ಇಟ್ಟು ಬಿಡ್ತಿದ್ವಿ :P

ಇನ್ನು ಕೆಲವ್ರಿಗೆ ಇದೇ ಟೈಮ್ ಗೆ ಕರೆ ಬರುತ್ತೆ ಅಂತ ಗೊತ್ತಿರ್ತಿತ್ತು.. ದಿನಾ ಆ ಟೈಮ್ ಅಲ್ಲಿ ಬಂದು ಕುಳಿತು ಅವರಿಗೆ ಬಂದ ಕರೆ ಅವರೇ ರಿಸೀವ್ ಮಾಡ್ಕೊಂಡ್ ಹೋಗ್ತಿದ್ರು... ಇನ್ನು ಕೆಲವು ದ್ವನಿಗಳು ಎಷ್ಟು ಪರಿಚಿತ ಆಗಿದ್ವು ಅಂದ್ರೆ ಯಾರು ಮಾಡಿದ್ದು ಅಂತ ತಕ್ಷಣ ಗೊತ್ತಾಗ್ತಿತ್ತು. ಅದ್ರಲ್ಲೂ ಕೆಲವು ಸ್ಪೆಷಲ್ ಕಾಲ್ ಬಂದಾಗ ಬಹಳ ಬೇಗ ಕಂಡು ಹಿಡೀತಾ ಇದ್ವಿ... ;)

ನಮಗೆ ಕರೆ ಬರೋ ಟೈಮ್ ಅಲ್ಲಿ ಇನ್ಯಾರೋ ಗಂಟೆ ಗಟ್ಟಲೆ ಮಾತಾಡ್ತಾ ಕೂತಿದ್ರೆ ಅವ್ರಿಗೊಂದ್ಸಲ್ಪ ಬೈಕೋಳ್ತಾ ಇದ್ವಿ..

ನಮ್ಮ ಗುಂಪಲ್ಲಿ ಮೊದ್ಲಿಗೆ ಮೊಬೈಲ್ ತಗೊಂಡವನೆಂದರೆ ರೋಹಿತ, ಆಗ ಒಂದು ಹೊಸ ಪ್ರಯೋಗ ಶುರು ಮಾಡಿದ್ವಿ. ಅವನ ಮೊಬೈಲ್ ಇಂದ ಮನೆಗೆ ಮಿಸ್ ಕಾಲ್ ಕೊಡೋದು ಆಗ ಮನೆಯಿಂದ ವಾಪಸ್ ಕರೆ ಮಾಡೋದು ಅಂತ ಮನೆಯಲ್ಲಿ ಮಾತಾಡಿಕೊಂಡ್ವಿ. ಆದ್ರೆ ಮಜಾ ಅಂದ್ರೆ ಮನೇಲಿ ಇದ್ದಿದ್ದು ಲ್ಯಾಂಡ್ ಲೈನ್ ಅದಕ್ಕೆ ಕಾಲರ್ ಐಡಿ ನೂ ಇರ್ಲಿಲ್ಲ.. ಹಂಗಾಗಿ ಮನೆಯಲ್ಲಿ ಮಿಸ್ ಕಾಲ್ ಬಂದಾಗಲೆಲ್ಲ ನನ್ನ ಹಾಸ್ಟೆಲ್ ಗೆ ಕಾಲ್ ಮಾಡ್ತಿದ್ರು., ಕೆಲವು ಸಲ ಮನೆಗೆ ಯಾವ್ದಾದ್ರು ರಾಂಗ್ ನಂಬರ್ ನಿಂದ ರಿಂಗಾದ್ರು ನಾನೇ ಇರ್ಬೇಕು ಅಂತ ನಂಗೆ ಕರೆ ಮಾಡ್ತಿದ್ರು.

ಇಂಜಿನೀರಿಂಗ್ ನ ಕೊನೆಯ ವರ್ಷದಲ್ಲಿ ಮೊಬೈಲ್ ತಗೊಂಡೆ. ಆಗ ಸುಮಾರಿಗೆ ಎಲ್ಲರ ಬಳಿಯೂ ಮೊಬೈಲ್ ಬಂದಾಗಿತ್ತು. ಫೋನ್ ಗೆ ಕರೆಗಳು ಬರೋದೂ.. ನಾವು ಕೂಗೋದೂ ಕಮ್ಮಿ ಆಯ್ತು

Comments !