ಹೊಸಬೆಳಕೂ ಮೂಡುತಿದೆ

ನನ್ನ ಬರಹಗಳಿಗೆ ಮತ್ತು ಫೋಟೋಗಳಿಗೆ ವೆಬ್ ಸೈಟ್ ಮಾಡಬೇಕು ಅಂತ ಬಹಳ ದಿನಗಳಿಂದ ಯೋಚಿಸುತ್ತಿದ್ದೆ. ನನ್ನ ವೆಬ್ ಸೈಟ್ ಬರುತ್ತೆ ಅಂತ ಬಹಳಷ್ಟು ಸ್ನೇಹಿತರಿಗೆ ಹೇಳಿದ್ರಿಂದ ಅವರು ಈಗ ಬರುತ್ತೆ/ನಾಳೆ ಬರುತ್ತೆ ಅಂತ ಕಾದೂ ಕಾದೂ ಬೇಸತ್ತು ಕೊನೆಗೆ ಕೇಳೋದೇ ಬಿಟ್ಟು ಬಿಟ್ಟಿದ್ದರು. ಇನ್ನೂ ಸಲ್ಪ ದಿನ ತಡವಾಗಿದ್ದರೆ, ಅವರೇ ನನ್ನ ಹೆಸರಲ್ಲಿ ವೆಬ್ ಸೈಟ್ ಮಾಡಿ ಕೊಡ್ತಿದ್ದರೇನೋ ;)

ಹೊಸಬೆಳಕು

ಅಂತೂ ಇಂತು ಹೊಸಬೆಳಕು ಬಂದೇ ಬಿಟ್ಟಿದೆ. ವೆಬ್ ಸೈಟ್ ಇಲ್ಲ ಎಂದು ಎಲ್ಲೂ ಹಾಕದೇ ಉಳಿಸಿಕೊಂಡ ಕೆಲವು ಬರಹಗಳಿಗೂ ಈಗ ಜೀವ ಬಂದಂತಾಯ್ತು.

ಈ ಅಂತರ್ಜಾಲ ಪುಟವನ್ನು ಮಾಡಲು PHP ಮತ್ತು CouchDb ಉಪಯೋಗಿಸಲಾಗಿದೆ. ಇದರ ಬಗ್ಗೆ ವಿವರಗಳನ್ನು ಸದ್ಯದಲ್ಲೇ ಹೇಳುವೆ.

Comments !