ಹೊಸ ಕ್ಯಾಮೆರಾ ಮತ್ತು ಕಲಿಕೆ

ಇಬ್ಬರು ಗೆಳೆಯರು...

"ಮಗಾ!... ನಾನೊಂದು ಕ್ಯಾಮೆರಾ ತಗೊಂಡೆ"

"ಸೂಪರ್ ಕಣೋ "

"ನೀ ಸಕತ್ ಫೋಟೋ ತೆಗೀತಿರ್ತೀಯಲ್ಲ ನಂಗೂ ಹೇಳಿಕೊಡೋ"

"ಹು ಕಣೋ... ಮುಖ್ಯವಾಗಿ ISO, ಎಕ್ಸ್ ಪೋಸರ್ ಬಗ್ಗೆ ತಿಳ್ಕೊಂಡ್ರಾಯ್ತು ಅಷ್ಟೆ"

"ಹೌದಾ!"

"ಹು.... ನೋಡೂ ಇದ್ರಲ್ಲಿ M ಅಂತ ಇದ್ಯಲ್ಲಾ ಅದು ಮ್ಯಾನುಯಲ್ ಮೋಡ್, ನಿಂಗೆ ಬೇಕಾದಂಗೆ ನೀ ಸೆಟ್ ಮಾಡ್ಕೊಂಡು ತೆಗೀಬೋದು"

"ಅಯ್ಯೋ... ಅಷ್ಟೆಲ್ಲಾ ಕಷ್ಟ ಯಾಕೋ... ಇದ್ರಲ್ಲಿ ಆಟೋಮ್ಯಾಟಿಕ್ ಮೋಡ್ ಇದೆ ನೀ ನೋಡಿಲ್ವಾ? ಎಲ್ಲಾ ಕೆಲ್ಸ ಅದೇ ಮಾಡುತ್ತೆ, ನೀ ಸುಮ್ನೆ ಕ್ಲಿಕ್ ಮಾಡಿದ್ರೆ ಸಾಕು "

"!" (ಮತ್ಯಾಕೆ ನನ್ನತ್ರ ಕೇಳಿದನೋ ಅರ್ಥ ಆಗ್ಲಿಲ್ಲ)

Comments !