ಹೆಜ್ಜೆ - ಕನ್ನಡ ಮತ್ತು ತಂತ್ರಜ್ಞಾನದ ಜೊತೆ ಜೊತೆಗೆ

ನಮ್ಮ ಸಂಚಯ ತಂಡದಿಂದ ಅರಿವಿನ ಅಲೆಗಳು ನಂತರದ ಎರಡನೇ ಕಾರ್ಯಕ್ರಮ "ಹೆಜ್ಜೆ". ಈಗ ತಂತ್ರಜ್ಞಾನ ಓಡುತ್ತಿರುವ ವೇಗಕ್ಕೆ ಸಮನಾಗಿ ನಮ್ಮ ಭಾಷೆಯನ್ನು ಕೊಂಡೊಯ್ಯಲು ನಮ್ಮ ತಂಡದಿಂದ ಇಡುತ್ತಿರುವ ಪುಟ್ಟ ಪುಟ್ಟ "ಹೆಜ್ಜೆ"ಗಳು.

ಹೆಜ್ಜೆ

ಕನ್ನಡ ಬಳಕೆ, ತಂತ್ರಾಂಶಗಳ ಬಳಕೆ, ತಂತ್ರಾಂಶಗಳಲ್ಲಿ ಸ್ಥಳೀಯ ಸೊಗಡು, ತಂತ್ರಾಂಶಗಳ ತಯಾರಿಕೆ ಹಾಗೂ ಇತರೆ ವಿಷಯಗಳನ್ನು ನಮ್ಮ ನಿಮ್ಮೊಂದಿಗೆ ಹಂಚಿಕೊಳ್ಳಲು ತಂತ್ರಜ್ಞರು ಉತ್ಸುಕರಾಗಿದ್ದಾರೆ. ವಿಜ್ಞಾನ ಲೇಖಕ ಶ್ರೀ ನಾಗೇಶ್ ಹೆಗಡೆ, ಛಂದ ಪುಸ್ತಕದ ವಸುದೇಂದ್ರ ಜೊತೆಗಿದ್ದಾರೆ.

ವಿವರಗಳು

ದಿನಾಂಕ: ಜನವರಿ ೨೨, ೨೦೧೨

ಸ್ಥಳ: ದ ಎನರ್ಜಿ & ರಿಸರ್ಚ್ ಇನ್ಸ್ಟಿಟ್ಯೂಟ್ (TERI-SRC) ಆಡಿಟೋರಿಯಂ ದೊಮ್ಮಲೂರು ಎರಡನೇ ಹಂತ ಬೆಂಗಳೂರು ೫೬೦೦೭೧

ಅಂತರ್ಜಾಲ ಪುಟ: http://hejje.sanchaya.net

ನೊಂದಾಯಿಸಿಕೊಳ್ಳಲು: http://hejje.sanchaya.net/register/

ಕಾರ್ಯಕ್ರಮಗಳು: http://hejje.sanchaya.net/program-list/

ರಿಜಿಸ್ಟರ್ ಮಾಡಿಕೊಳ್ಳಲು(ನೊಂದಾಯಿಸಿಕೊಳ್ಳಲು) ಏನಾದರೂ ತೊಂದರೆಯಾದರೆ team AT sanchaya ಡಾಟ್ net ಗೆ ಈಮೈಲ್ ಕಳಿಸಿ.

ಈ ಕಾರ್ಯಕ್ರಮದಲ್ಲಿ ಏನು ಸಿಗುತ್ತದೆ, ಏನು ಮಾಡಲು ಹೊರಟಿದ್ದಾರೆ ಎಂಬ ಕುತೂಹಲವಿದ್ದರೆ ಖಂಡಿತ ನೀವು ಭಾಗವಹಿಸಲೇಬೇಕು... :)

"ಹೆಜ್ಜೆ" ಕಾರ್ಯಕ್ರಮದಲ್ಲಿ ಸಿಗುತ್ತೀರಲ್ವ?

Comments !