ಹೆದರಿಸಿದವರ್ಯಾರು

ಛೇ! ಆ ಪುಟ್ಟ ಹುಡುಗಿನಾ ಅಷ್ಟೋಂದು ಹೆದರಿಸಬಾರದಿತ್ತು. ಅವಳಂತೂ ಅಳೋದಕ್ಕೇ ಶುರು ಮಾಡಿದ್ಲು, ಪುಟ್ಟ ಕಂಗಳಲ್ಲಿ ಸುತ್ತಲೂ ಹುಡುಕುತ್ತಾ ನಡೆಯುತ್ತಿದ್ದಳು, ಮೊದಲೇ ಇಲ್ಲಿಗೆ ಬರೋದಕ್ಕೆ ಹೆದರಿದ್ದಳು ಅದರ ಜೊತೆಗೆ ನಾನು ಹಿಂಗೆ ಮಾಡಿದ್ದು ಸರಿನಾ?

"ಎಲ್ಲಾ ರೆಡಿ ಆಗಿ ಬೇಗ ಮುಂದಿನ ಬ್ಯಾಚ್ ಬರ್ತಾ ಇದೆ, ಚೆನ್ನಾಗಿ ಹೆದರಿಸುದ್ರೇನೇ ಇಲ್ಲಿಗೆ ಜಾಸ್ತಿ ಜನ ಬರೋದು" ಅಂತ ಅವನು ಟಿಕೆಟ್ ಎಲ್ಲಾ ಕೊಟ್ಟ ಬಳಿಕ ಒಳಗೆ ಬಂದು ಕೂಗಿ ಹೇಳಿದಾಗ, ಮುಖವಾಡ ತೊಟ್ಟು ರೆಡಿ ಆದೆ.

ಮುಖವಾಡ

Comments !