ಹಸಿರು ಹಾವು

ಬ್ಯಾಗಿನಿಂದ ಕ್ಯಾಮೆರಾ ತೆಗೆಯುತ್ತಾ, ಅಮ್ಮಾ ಹಸಿರು ಹಾವು ಬಂದಿತ್ತೇನೇ? ಅಂತ ಕೇಳಿದ್ದಕ್ಕೆ, ಬರದೇನು ಬಂತು ಇಲ್ಲೇ ಗುಲಾಬಿ ಗಾರ್ಡನ್ ಅಲ್ಲೋ.. ಬೀನ್ಸ್ ಗಿಡದಲ್ಲೋ ಇರ್ಬೋದು ನೋಡು ಅಂತ ನಗುತ್ತಾ ಅಂದಳು. ಹಸಿರು ಹಾವು ನಮ್ಮನೇಲಿ ಒಂತರಾ ಸಾಕು ಪ್ರಾಣಿಯಾಗಿಬಿಟ್ಟಿದೆ ಅಂತ ಹೇಳಿಕೊಳ್ಳುತ್ತಾ ಕ್ಯಾಮೆರಾ ಎತ್ತಿಕೊಂಡು ಹೊರಗಡೆ ಗುಲಾಬಿ ಗಾರ್ಡನ್ ಗೆ ಬಂದೆ.

ಅಮ್ಮ ಹೇಳಿದ್ದು ಸರಿಯಾಗೇ ಇತ್ತು, ಅಲ್ಲೇ ಗುಲಾಬಿ ಗಿಡದಲ್ಲಿ ಏನನ್ನೋ ಹೊಂಚು ಹಾಕುತ್ತಾ ಇತ್ತು.. ಅದು ಏನನ್ನೋ ಹಿಡಿಯಲು ತಯಾರಿ ಮಾಡಿಕೊಳ್ಳುತ್ತಿದೆ ಎಂದು ಅರಿವಾದರೂ ಅದರಷ್ಟು ತಾಳ್ಮೆ ಇಲ್ಲದ ಕಾರಣ ಅದು ಬೇಟೆ ಹಿಡಿಯುವವರೆಗೂ ಕಾಯದೆ ಆಚೀಚೆ ಓಡಾಡಿ ಕೆಲವು ಹೂವುಗಳ ಫೋಟೋ ತೆಗೆದುಕೊಂಡು ಬಂದೆ. ನಾನು ವಾಪಾಸು ಬರೋ ಅಷ್ಟರಲ್ಲಿ ಅದು ಕೀಟವನ್ನು ಹಿಡಿದಾಗಿತ್ತು..

ಹಿಡಿದ ಕ್ಷಣ

ಕೀಟವನ್ನು ಹಿಡಿದ ಕ್ಷಣ

ನಗು

ನಗು?

ಕಾಲು ಮುಗೀತು
ತಿಂದಾದ ಬಳಿಕ ಅದರ ಕುತ್ತಿಗೆಯಲ್ಲಾದ ಬಣ್ಣದ ಬದಲಾವಣೆ.

ತಿಂದಾದ ಬಳಿಕ ಅದರ ಕುತ್ತಿಗೆಯಲ್ಲಾದ ಬಣ್ಣದ ಬದಲಾವಣೆ.

ತಿಂದು ಮುಗಿದ ಮೇಲೆ ಮತ್ತೆ ತಪಸ್ವಿಯಂತೆ ಅಲುಗಾಡದೇ ಕುಳಿತಿತು, ಈಗ ಅಲ್ಲಾಡತ್ತೆ.. ಈಗ ಅಲ್ಲಾಡುತ್ತೆ... ಅಂತ ಸಲ್ಪ ಹೊತ್ತು ಕಾದು ಮತ್ತೆ ನಾನೇ ಸೋತು ಅಲ್ಲಿಂದ ಎದ್ದು ಹೊರಟೆ... :)

Comments !