ಹಿಂದೊಂದ್ಸಲ ಹಸಿರು ಹಾವಿನ ಬಗ್ಗೆ ಒಂದು ಬ್ಲಾಗ್ ಬರೆದಿದ್ದೆ(ಇಲ್ಲಿ ನೋಡಿ), ಈ ಸಲ ಊರಿಗೆ ಹೋದಾಗ ಮತ್ತೆ ಅದೇ ಪೋಸ್ ಕೊಟ್ಕೊಂಡು ಅಲ್ಲೇ ಕೂತಿತ್ತು. ಮತ್ತೆ ಮತ್ತೆ ಅದೇ ಪೋಸ್ ಕೊಟ್ರೆ ಯಾರು ಫೋಟೋ ತೆಗೀತಾರೆ ನೀವೇ ಹೇಳಿ. :)
ಫೋಟೋ ತೆಗ್ಯಲ್ಲ ಅಂತ ಒಂದು ಟ್ವೀಟ್ ಕೂಡ ಹಾಕಿದ್ದೆ.
ಹಸಿರು ಹಾವು ಮತ್ತೆ ಗುಲಾಬಿ ಗಾರ್ಡನ್ ಅಲ್ಲೇ ಇದೆ, ಈ ಸಲ ಫೋಟೋ ತೆಗ್ಯಲ್ಲ ಅಂತ ಹೇಳಿದೀನಿ :)aravindavk.in/blog/hasiru-ha…
— Aravinda (@aravindavk) September 19, 2012
ಬಹುಷಃ ಹಸಿರು ಹಾವು ಕೂಡ ಟ್ವೀಟ್ ನೋಡ್ತು ಅನ್ಸುತ್ತೆ, ಮದ್ಯಾನದ ಹೊತ್ತಿಗೆ ಆ ಜಾಗ ಬಿಟ್ಟು ಬೇರೆ ಕಡೆ ಬಂತು, ಹೀ ಹೀ ಅಂತ ನಕ್ಕೊಂಡು ಮತ್ತೆ ಕ್ಯಾಮೆರಾ ಹಿಡ್ಕೊಂಡು ಹೊರಟೆ. ಈ ಸಲ ಫೋಟೋ ಬೇಡ ವೀಡಿಯೋ ತೆಗ್ಯಣಾ ಅಂತ ಸೆಟ್ ಮಾಡಿಕೊಳ್ಳೋ ಅಷ್ಟರಲ್ಲೇ ಅದು ಕಪ್ಪೆನ ಹಿಡಿದು ನುಂಗೋಕೆ ಶುರು ಮಾಡಿಯಾಯ್ತು.
ವೀಡಿಯೋ ಎಡಿಟ್ ಮಾಡಿದ್ದು ಲಿನಕ್ಸಿನಲ್ಲಿ kdenlive ಎಂಬ ತಂತ್ರಾಂಶ ಬಳಸಿ ಜೊತೆಗೆ ಕ್ರಿಯೇಟಿವ್ ಕಾಮನ್ ಲೈಸೆನ್ಸ್ ನಲ್ಲಿ ಲಭ್ಯವಿದ್ದ ಹಿನ್ನಲೆ ಮ್ಯೂಸಿಕ್ ಅನ್ನು ಬಳಸಿದ್ದೇನೆ. (ಹೆಚ್ಚಿನ ವಿವರ ಇಲ್ಲಿದೆ)
Comments !