ಹಾಲು ಮತ್ತು ಮಣ್ಣು

ತುಮಕೂರಿನಲ್ಲಿ ಅಕ್ಕನ ಮನೆಗೆ ಹೋಗಿದ್ದಾಗ, ಅದಿತಿಯ ಬಗ್ಗೆ ಹೇಳಿದ ಕಥೆ.

ಅದಿತಿ ಇನ್ನೂ LKG, ಒಂದಿನ ಸ್ಕೂಲಿಂದ ಬಂದವಳೇ..

"ಅಮ್ಮಾ ನಾಳೆ ಒಂದು ಕವರಲ್ಲಿ ಹಾಲು ಮತ್ತೆ ಮಣ್ಣು ತರ್ಬೇಕಂತೆ.."

ಅಕ್ಕನಿಗೆ confuse ಆಯ್ತು, ಭಾವನ ಹತ್ರ, "ರೀ ಒಂಚೂರು ಕೇಳಿ" ಅಂದ್ಲು. ಭಾವ ಕೇಳಿದಾಗ್ಲೂ ಅದಿತಿ ಹಂಗೇ ಹೇಳಿದ್ಲಂತೆ.

ಇನ್ನೆಂತ ಮಾಡೋದಪ್ಪಾ.. ಹಾಲು, ಮಣ್ಣು ಎಂತಕ್ಕೆ ತರಕ್ಕೆ ಹೇಳಿದಾರಪ್ಪಾ ಅಂತ ಅವರು ಟೀಚರ್‍ಗೆ ಕಾಲ್ ಮಾಡಿದ್ರಂತೆ...

ಆಗ ಟೀಚರ್ ಹೇಳಿದ್ದು..

"Environment day ಅಲ್ವಾ.. ಮಕ್ಕಳಿಗೆ ಗಿಡ ನೆಡೋದು ಕಲಿಸಿಕೊಡೋಣ ಅಂತ ಹಾಲಿನ ಕವರ್‍ನಲ್ಲಿ ಮಣ್ಣು ಹಾಕಿಕೊಂಡು ಬರಕ್ಕೆ ಹೇಳಿದೀವಿ ಹುಡುಗ್ರ ಹತ್ರ.."

***

Comments !