ಹಾಗೇ ಸುಮ್ಮನೆ

ಊಟಕ್ಕೆ ವಾಸುದೇವ್ ಮತ್ತೆ ಭರತ್ ಸಿಗ್ತೀನಿ ಅಂದಿದ್ರು, ಅಲ್ಲೇ ಹೋಗಿದ್ದೆ, ಅವರಿಬ್ಬರು ಬರ್ಲಿ ಅಂತ ಕಾಯ್ತಾ ಇದ್ದೆ.

ಹಂಗೇ ನಿಂತಿರುವಾಗ ಒಬ್ರು ನಮಸ್ಕಾರ ಮಾಡಿದ್ರು, ಯಾರಪ್ಪಾ ಇವ್ರು ನಂಗೆ ಗುರ್ತಾಗ್ತಿಲ್ವಲ್ಲ ಅಂತ ಅನ್ನಿಸ್ತು, ಆದ್ರೂ ನಮಸ್ಕಾರ ಮಾಡಿದೆ. ಅವರು ಯಾಕೋ ದುರಗುಟ್ಟುಕೊಂಡು ಹೋದ್ರು. ಎಲಾ ಇವರಾ ಅಂತ ಹಂಗೇ ಓಡಾಡ್ತಾ ಕಾಯ್ತಾ ಇದ್ದೆ, ಮತ್ತೆ ಒಬ್ರು ನಮಸ್ಕಾರ ಮಾಡಿದ್ರು ನಾನು ಮತ್ತೆ confuse ಆಗಿ ಹಿಂದೆ ತಿರುಗಿ ನೋಡಿದೆ, ಅಲ್ಲಿ ಮೂಲೆಯಲ್ಲಿದ್ದ ದೇವಸ್ತಾನದಲ್ಲಿ ಗಣೇಶ ಕಾಣಿಸಿದ.

***

ಅವತ್ತು ಹುಷಾರಿಲ್ಲ ಅಂತ ಡಾಕ್ಟರ್ ಹತ್ರ ಹೋಗಿದ್ದೆ, ಮಾತ್ರೆ ಕೊಟ್ಟು ಹೇಳಿದ್ರು

"ಇದನ್ನ ತಗೊಳ್ಳಿ, ಆಮೇಲೆ ಎರಡು ದಿನ ಬಿಟ್ಟು ಬನ್ನಿ"

"ಸರಿ ಡಾಕ್ಟರ್" ಅಂದು ಅಲ್ಲಿಂದ ಬಂದಿದ್ದೆ.

ಆಮೇಲೆ ಎರಡು ದಿನಗಳು ಮಾತ್ರೆ ತಗೊಂಡೆ, ಆರೋಗ್ಯ ಸುದಾರಿಸಿತ್ತು. ಮೂರನೇ ದಿನ ಸಂಜೆ ಡಾಕ್ಟರ್ ಹತ್ರ ಹೋದೆ.

"ಹೇಗಿದ್ದೀರಾ ಈಗ?"

"ಆರಾಮಾಗಿದೀನಿ ಡಾಕ್ಟರ್, ಅದೇ ನೀವು ಎರಡು ದಿನ ಬಿಟ್ಟು ಬರಕ್ಕೆ ಹೇಳಿದ್ರಲ್ಲ.. "

ಯಾಕೋ ಗೊತ್ತಿಲ್ಲ, ಡಾಕ್ಟರ್ ಒಂದು ಕ್ಷಣ confuse ಆದಂಗೆ ಅನ್ನಿಸ್ತು.. ಇವನ್ಯಾವನಪ್ಪಾ.. ಹೇಳಿದ್ದೇನೋ ಸರಿ, ಅದನ್ನೇ ಅಕ್ಷರಷಃ ಪಾಲಿಸೋರೂ ಇರ್ತಾರಾ ಅಂತ ಯೋಚಿಸ್ತಾ.. ಅದೇ ಚೀಟಿಯನ್ನ ಮತ್ತೊಮ್ಮೆ ನೋಡಿ ಹೇಳಿದ್ರು..

"ಇನ್ನು ಒಂದು ದಿನಕ್ಕೆ ಮಾತ್ರೆ ಇದೆಯಲ್ಲಾ, ಅದನ್ನ ತಗೊಳ್ಳಿ.. ಆಮೇಲೆ ಕಡಿಮೆ ಆಗದಿದ್ರೆ ಮಾತ್ರ ಬನ್ನಿ ಇಲ್ಲ ಅಂದ್ರೆ ಬರೋದೇನೂ ಬೇಡ ಪರವಾಗಿಲ್ಲ" ಅಂತ.

Comments !