ARAVINDA VK

ಗುರುತು

Nov 22, 2011
1 minute read.
ಸಣ್ಣ ಕಥೆ kannadablog

"ಹೇ ನೀನು ನಿನ್ನೆ ಗಾಂಧಿಬಜಾರ್ ಅಲ್ಲಿ ಒಂದು ಬಟ್ಟೆ ಅಂಗಡಿಗೆ ಹೋಗಿದ್ದಿ ಅಲ್ವಾ?"

"ಹೌದು ಕಣೋ…​ ನಿಂಗೆ ಯಾರು ಹೇಳಿದ್ರು?"

"ತಡೀ ಅಷ್ಟೇ ಅಲ್ಲ, ನೀನು ಒಂದು ಗ್ರೀನ್ ಕಲರ್ ಚೂಡಿದಾರ್ ತಗೊಂಡೆ ತಾನೆ? "

"!!! ಹೌದು, ಆದ್ರೆ ನಿಂಗೆ ಹೆಂಗೆ ಗೊತ್ತಾಯ್ತು?"

ಎಲಾ ಇವನ ಅಂತ ಅವಳು ಮನಸಲ್ಲೇ ಅಂದುಕೊಳ್ಳುತ್ತಾ, ಇವನಿಗೆ ಹೇಗೆ ಗೊತ್ತಾಯ್ತು ಅಂತ ಯೋಚಿಸ್ತಾ ಇದ್ದಳು. ನಾನೇ ಎನಾದ್ರೂ ಇವನಿಗೆ ಹೇಳಿದ್ನಾ ಅಥವಾ ಅಂಗಡಿಲಿ ಯಾರಾದ್ರೂ ಗುರ್ತಿದಾರಾ.

ಕೊನೆಗೆ ಅವಳು ಯೋಚಿಸೋದು ನೋಡಲಾರದೆ, ಇವನು ಹೇಳಿದ…​

"ನಿಂಗೊಂದು ವಿಷಯ ಹೇಳ್ತೀನಿ ಬೇಜಾರು ಮಾಡ್ಕೋಬಾರ್ದು"

ನನ್ನ ಬಗ್ಗೆ ಎಲ್ಲಾ ಹೆಂಗೋ ತಿಳ್ಕೊಂಡಿದಾನೆ, ಅದೂ ಅಲ್ಲದೆ ಬೇಜಾರು ಮಾಡಿಕೋಬೇಡ ಅಂತ ಬೇರೆ ಹೇಳ್ತಿದಾನೆ! ಏನು ಕತೆ ಇವನದ್ದು ಅರ್ಥನೇ ಆಗ್ತಿಲ್ವಲ್ಲ..

"ಸರಿ ಬೇಜಾರು ಮಾಡಿಕೊಳ್ಳಲ್ಲ ಹೇಳು"

"ನಿನ್ನೆ ನೀನು ಅಂಗಡಿಗೆ ಹೋದಾಗ ಒಂದು ಗೊಂಬೆ ನಿನ್ನನ್ನು welcome ಮಾಡ್ತಾ?"

"ಹೌದೋ…​ ಒಳ್ಳೆ ಮಜಾ ಇತ್ತು ಆ ಗೊಂಬೆ, ಅದ್ರ ಜೊತೆ ಒಂದು ಫೋಟೋನೂ ತೆಗಿಸ್ಕೊಂಡೆ.. ತೋರಿಸ್ತೀನಿ ಇರು"

"ಫೋಟೋ ತೋರಿಸೋದೇನೂ ಬೇಡ, ಅದೇನಾಯ್ತು ಅಂದ್ರೆ"

"ಅದೇನು ಬೇಗ ಹೇಳು.. ಒಳ್ಳೆ ಹೀಗೂ ಉಂಟೇ ಸೀರಿಯಲ್ ತರ ಎಳೀತಿದ್ಯಲ್ಲ"

"ಮತ್ತೆ…​ ಮತ್ತೆ…​ ಆ ಗೊಂಬೆ ಒಳಗಿದ್ದಿದ್ದು ನಾನೇ"

"…​"

About Aravinda VK

Partner at Kadalu Investments, Creator of Sanka, Creator of Chitra, GlusterFS core team member, Maintainer of Kadalu Storage
Contact: Linkedin | Twitter | Facebook | Github | mail@aravindavk.in