
ಗುಬ್ಬಿ ಮತ್ತು ನವಿಲು
ಗುಬ್ಬಿ ಮತ್ತು ನವಿಲನ್ನು ಹುಡುಕಲು ಹೋಗಬೇಡಿ ನಾನೀಗ ಬರೆದಿರುವುದು ಕನ್ನಡದ ಎರಡು ಹೊಸ ಫಾಂಟ್‍ಗಳ ಬಗ್ಗೆ :)
ಕನ್ನಡಕ್ಕೆ ಸರಿಯಾದ ಯುನಿಕೋಡ್ ಫಾಂಟ್‍ಗಳು ಇಲ್ಲ ಎಂಬ ಕೊರಗು ಇದ್ದೇ ಇತ್ತು. ಕೆಲವು ಫಾಂಟ್‍ಗಳು ಮುಕ್ತ ಲೈಸೆನ್ಸ್‍ನಲ್ಲಿ ಲಭ್ಯವಿದ್ದರೂ ಅದನ್ನು ಸರಿಪಡಿಸುವವರು ಇರಲಿಲ್ಲ. ಬಹಳ ದಿನಗಳಿಂದ ಸರಿಪಡಿಸಲು ಪ್ರಯತ್ನ ಪಡುತ್ತಿದ್ದರೂ ಅದರ ಬಗ್ಗೆ ಮಾಹಿತಿಗಳು ಸರಿಯಾಗಿ ಸಿಗುತ್ತಿರಲಿಲ್ಲ. ಕೆಲವೊಂದಷ್ಟು ಯುನಿಕೋಡ್ ರೂಲ್ಸ್ ಬಗ್ಗೆಯೇ ಸಂದೇಹಗಳು, ಇನ್ನು ಕೆಲವೊಂದಷ್ಟು ಫಾಂಟ್‍ನ ಜವಾಬ್ದಾರಿಯೋ ಅಥವಾ ರೆಂಡರಿಂಗ್ ಇಂಜಿನ್‍ನ ಜವಾಬ್ದಾರಿಯೋ ತಿಳಿಯುತ್ತಿರಲಿಲ್ಲ.
ಹೀಗೇ ಈಗಿರುವ ಫಾಂಟ್‍ಗಳಲ್ಲಿನ ತೊಂದರೆಗಳನ್ನು ಪಟ್ಟಿ ಮಾಡಿಕೊಂಡು, ಗ್ಲಿಫ್(ಅಕ್ಷರದ ಚಿತ್ರ) ಮಾಡಲು ಇರುವ ಸಾಧ್ಯತೆಗಳು ಹಾಗೂ ಅದಕ್ಕೆ ಬೇಕಾದ ತಂತ್ರಾಂಶಗಳ ಅಧ್ಯಯನದಲ್ಲಿ ತೊಡಗಿಕೊಂಡೆ. ಮೊನ್ನೆ ವಾಸುದೇವ್ ಡೆಬಿಯನ್ ಪ್ಯಾಕೇಜ್ ಮಾಡುವಾಗ ಕೇಳಿದ, ಕೇದಗೆ ಫಾಂಟ್‍ಗೆ ಬಹಳ ಹಿಂದೆ ರಿಪೋರ್ಟ್ ಆದ ದೋಷವರದಿ ಹಾಗೇ ಇದೆ, ಅದನ್ನು ಸರಿಪಡಿಸಿ ಆ ಫಾಂಟ್ ಅನ್ನು ನೋಡಿಕೊಳ್ಳಬಹುದಾ ಅಂತ. ನಾನು ಇನ್ನೊಂದು ಫಾಂಟ್ ಕೆಲಸ ಅರ್ಧ ಮಾಡುತ್ತಿದುದರಿಂದ ನೋಡೋಣ ಎಂದಿದ್ದೆ. ಕೊನೆಗೆ ನೋಡೋಣ ನೋಡೋಣ ಎಂದು ಹಾಗೇ ಬಿಟ್ಟರೆ ಆಗದ ಕತೆ ಎಂದು ಆ ಫಾಂಟ್‍ನಲ್ಲಿದ್ದ ಬಗ್ ಫಿಕ್ಸ್ ಮಾಡಿದೆ, ಆ ದೋಷವರದಿಯಲ್ಲಿಲ್ಲದಿದ್ದರೂ ನನ್ನ ಪಟ್ಟಿಯಲ್ಲಿದ್ದ ಕೆಲವು ಬಗ್ ಫಿಕ್ಸ್ ಮಾಡಿದೆ. ಎಲ್ಲಾ ಮುಗಿದ ಮೇಲೆ, ಆ ಬದಲಾಯಿಸಿದ ಫಾಂಟ್‍ಗಳಿಗೆ ಅದೇ ಹೆಸರಿಡಬಹುದಾ ಮತ್ತು ನಾನೇ ನೋಡಿಕೊಳ್ಳುತ್ತೇನೆ ಎಂದು ಹೇಳಲು ಸಾಧ್ಯವಾ ಅಂತ ದ್ವಂದ್ವ ಆಯ್ತು.. ಆಗ ಸಹಾಯಕ್ಕೆ ಬಂದಿದ್ದು ಮೈಸೂರಿನ ರವಿಶೇಖರ್. ಅವರ ಸಲಹೆಯಂತೆ ಹೊಸ ಹೆಸರು ಯೋಚಿಸುವಾಗ "ಗುಬ್ಬಿ" ಎಂದು ಹೇಳಿದೆ, ಅದು ಅವರಿಗೂ ಬಹಳ ಇಷ್ಟ ಆಯಿತು, ಇನ್ನೊಂದು ಹೆಸರನ್ನು ಹುಡುಕುವಾಗ ಅದೇ ಥೀಮ್ ಅಲ್ಲಿ ಹುಡುಕು ಅಂದರು, ಕೊನೆಗೆ "ನವಿಲು" ಆರಿಸಿದ್ದಾಯ್ತು. ಆ ಹೆಸರು ಓದಿಕೊಂಡರೇ ಒಂತರಾ ಆನಂದವಾಗ್ತಿತ್ತು :) ಎಲ್ಲಾ ಬದಲಾವಣೆಗಳು ಆದ ನಂತರ github ನಲ್ಲಿ ಅದನ್ನು ಹಾಕಿದ್ದಾಯ್ತು.


ಈ ಫಾಂಟ್‍ಗಳಲ್ಲಿ ಧೋಷಗಳಾವುದೂ ಇಲ್ಲವೆಂದಲ್ಲ, ಇನ್ನೂ ಕೆಲವು ತೊಂದರೆಗಳಿವೆ ಒಂದಷ್ಟು ಪಟ್ಟಿ ಮಾಡಿಕೊಂಡಿದ್ದೇನೆ, ನಿಮಗೆ ತೊಂದರೆಯಾದದ್ದೂ ಹೇಳಿ, ಮುಂಬರುವ ಆವೃತ್ತಿಯಲ್ಲಿ ಸರಿಪಡಿಸಬಹುದು. ಈ ಫಾಂಟ್‍ಗಳ ಬಗ್ಗೆ ಇಲ್ಲಿ ಮತ್ತು ಇಲ್ಲಿ ಓದಿರುತ್ತೀರಿ. ಈಗ ಮೊದಲನೇ ಆವೃತ್ತಿಯಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ನೋಡೋಣ.
ತಪ್ಪಿದ್ದ ಮೊದಲನೇ ಅಕ್ಷರ "ಅ"

ಓಕಾರ ಬರೆಯುವಾಗಿನ ತೊಂದರೆಗಳು
LibreOffice ಬಳಸುವರಿಗೆ ಅನುಭವ ಆಗಿರುತ್ತದೆ, "ಜಿನೋಮ್" ಎಂದು ಬರೆಯಲು ಹೋದರೆ "ಜಿ" ಮತ್ತು "ನೋ" ಕೂಡಿಕೊಂಡು ಓದಲು ಅಸಾಧ್ಯವಾಗುತ್ತದೆ. ಆದರೆ ಪಿಡಿಎಫ್ ಗೆ ಬದಲಾಯಿಸಿದಾಗ ಸರಿಯಾಗುತ್ತಿತ್ತು. ಅದು Libre Office ನ ತೊಂದರೆ ಎನಿಸಿದರೂ ಫಾಂಟ್ ನಲ್ಲೇ ಸರಿಪಡಿಸಬಹುದಾಗಿತ್ತು. ಕೆಳಗಿನ ಚಿತ್ರ ನೋಡಿ.

ಅಳವಡಿಸದ ಅಕ್ಷರಗಳು
Hyphen Minus, ರುಪಾಯಿ symbol, ಹಾಗೂ ಇನ್ನೂ ಕೆಲವು ಅಕ್ಷರಗಳು/ಚಿತ್ರಗಳು ಫಾಂಟ್ ನಲ್ಲಿ ಇರಲಿಲ್ಲ, ಹಾಗಾಗಿ ಅವಿಲ್ಲದೇ ಡಿಟಿಪಿ ಕೆಲಸಗಳನ್ನು ಮಾಡುವಾಗ ಅವುಗಳು ಸರಿಯಾಗಿ ಕಾಣಿಸುತ್ತಿರಲಿಲ್ಲ, ಕೆಲವಷ್ಟನ್ನು ಅಳವಡಿಸಿದ್ದಾಯಿತು. ಆದರೆ ಇನ್ನೂ ಬಹಳಷ್ಟು missing ಇದೆ.
ತಪ್ಪಾಗಿ ಕಾಣಿಸುವ ಅಕ್ಷರಗಳು
ಮಲ್ಲಿಗೆ ಫಾಂಟ್‍ನಲ್ಲಿ ವು ಬರೆದಿದ್ದು ಮ ತರಹ ಕಾಣಿಸುತ್ತಿತ್ತು, ಹಾಗೂ ಪು ಮತ್ತು ಫು ತಪ್ಪಿತ್ತು.

ಜನವರಿಯ ಕೊನೆಯ ವಾರದಲ್ಲಿ ಈ ಫಾಂಟ್‍ಗಳ ಎರಡನೇ ಆವೃತ್ತಿ ಬಿಡುಗಡೆ ಮಾಡುವ ಯೋಚನೆಯಿದೆ, ಅದರ ಒಳಗೆ ಸಾಧ್ಯವಾದಷ್ಟೂ ತೊಂದರೆಗಳನ್ನು ನಿವಾರಿಸುವ ಮನಸಿದೆ. ಇದೆಲ್ಲವನ್ನೂ ಸಾಧ್ಯವಾಗಿಸಲು ನಿಮ್ಮೆಲ್ಲರ ಸಹಕಾರ ಅಗತ್ಯವಿದೆ. ಈ ಫಾಂಟ್‍ಗಳನ್ನು ಬಳಸಿ, ತೊಂದರೆ ಕಂಡು ಬಂದಲ್ಲಿ ಹೇಳಿ.
ಫಾಂಟ್‍ಗಳನ್ನು ಮಾಡುವ ಮುಕ್ತ ತಂತ್ರಾಂಶಗಳ ಬಗ್ಗೆ, ಫಾಂಟ್ ತಂತ್ರಜ್ಞಾನದ ಬಗ್ಗೆ ಮುಂಬರುವ ದಿನಗಳಲ್ಲಿ ಬರೆಯುತ್ತೇನೆ. ನಾನು ಉಪಯೋಗಿಸಿರುವ ತಂತ್ರಾಂಶಗಳು FontForge, Python, Inkscape.
ಈ ಫಾಂಟ್‍ಗಳ ಬಗ್ಗೆ ವಾಸುದೇವ್ ಬರೆದಿರುವ ಬ್ಲಾಗ್ ಮತ್ತು ಶಿವು ಲಿನಕ್ಸಾಯಣದಲ್ಲಿ ಬರೆದಿರುವ `http://linuxaayana.net/2011/12/%E0%B2%97%E0%B3%81%E0%B2%AC%E0%B3%8D%E0%B2%AC%E0%B2%BF-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%A8%E0%B2%B5%E0%B2%BF%E0%B2%B2%E0%B3%81-%E0%B2%95%E0%B2%A8%E0%B3%8D%E0%B2%A8%E0%B2%A1/[ಬ್ಲಾಗ್] ಓದಿ.
ಗುಬ್ಬಿ ಫಾಂಟ್ ಅನ್ನು ಇಲ್ಲಿ_ ಹಾಗೂ ನವಿಲು ಫಾಂಟ್ ಅನ್ನು ಇಲ್ಲಿ download ಮಾಡಿಕೊಳ್ಳಬಹುದು. ಲಿನಕ್ಸ್ ಉಪಯೋಗಿಸುತ್ತಿದ್ದರೆ, download ಮಾಡಿದ ಫಾಂಟ್‍ಗಳನ್ನು ನಿಮ್ಮ ಹೋಮ್ ಡೈರೆಕ್ಟರಿಯಲ್ಲಿ .fonts ಎಂಬ ಡೈರೆಕ್ಟರಿ ಒಳಗೆ ಕಾಪಿ ಮಾಡಿ, ಆಮೇಲೆ ಟರ್ಮಿನಲ್ ಓಪನ್ ಮಾಡಿ fc-cache
ಎಂದು ರನ್ ಮಾಡಿ. ವಿಂಡೋಸ್ ಬಳಸುತ್ತಿದ್ದರೆ ರೈಟ್ ಕ್ಲಿಕ್ ಮಾಡಿ ಇನ್‍ಸ್ಟಾಲ್ ಮಾಡಬಹುದು ಅನ್ನಿಸುತ್ತೆ, ಅಥವಾ C:\Windows\Fonts ಡೈರೆಕ್ಟರಿಗೆ ಕಾಪಿ ಮಾಡಿ. (ನಾನು ವಿಂಡೋಸ್‍ನಲ್ಲಿ ಬಳಸಿ ನೋಡಿಲ್ಲ).
About Aravinda Vishwanathapura
Co-Founder & CTO at Kadalu Technologies, Creator of Sanka, Creator of Chitra, GlusterFS core team member, Maintainer of Kadalu Storage