ಗೋಪಿ ಫೋನ್ ಮಾಡಿದ್ದ...

ಇವತ್ತು ಅಪರೂಪಕ್ಕೆ ಗೋಪಿ ಫೋನ್ ಮಾಡ್ಬಿಟ್ಟಿದ್ದ...(ಗೋಪಿ ಬಗ್ಗೆ ಗೊತ್ತಿಲ್ಲದಿದ್ದರೆ ಇದನ್ನ ಮತ್ತು ಇದನ್ನ ಓದಿ)

"ಏನಾ ಗೋಪಿ ಏನ್ಸಮಾಚಾರ? ಫೋನ್ ಮಾಡ್ಬಿಟ್ಟಿದೀಯಾ?"

"ಇವತ್ತು ಆಫೀಸ್ ಗೆ ಹೋಗ್ವಾಗ ನಿನ್ನ ನೋಡಿದೆ ಕಣೋ"

"ಎಲ್ಲಿ ನೋಡಿದ್ದೋ?"

"ನಿನ್ನ ಅಂದ್ರೆ ನಿನ್ನನ್ನಲ್ವೋ.. ನಿನ್ನ ಕಾರ್ ನೋಡಿದೆ."

"ಕಾರ್ ನೋಡಿ ಗುರ್ತು ಹಿಡಿದ್ಯಾ? ಸೂಪರ್ ಕಣೋ ಕಾರ್ ನಂಬರ್ ನೆನ್ಪಿಟ್ಕೊಂಡಿದ್ಯಾ?"

"ಇಲ್ಲ ಮಾರಾಯಾ!, ಅದೂ..."

"ಪುಂಟೋ ಕಾರು ನೋಡಿ ನನ್ನ ಕಾರು ಅಂತ ಅಂದ್ಕೊಂಡ್ಯಾ?"

"ಅಲ್ವಲೇ... ಪುಂಟೋ ಅಂತ ಗೊತ್ತಾಗಿಲ್ಲ, ಒಂದು ಕಾರ್ ನೋಡಿದೆ ಕಣೋ, ಕಾರಿನ ಗ್ಲಾಸ್ ಗಳು ಮಾತ್ರ ಕ್ಲೀನ್ ಆಗಿತ್ತು. ಉಳಿದಂತೆ ಯಾವ ಕಲರು/ಯಾವ ಕಾರು ಅಂತ ಗೊತ್ತಾಗ್ಲಿಲ್ಲ.., ನಿಂದೇ ಕಾರ್ ಇರ್ಬೇಕು ಅಂತ ಅಂದುಕೊಂಡೆ."

(ಥೋ.. ಏನೋ ಅಪರೂಪಕ್ಕೆ ಫೋನ್ ಮಾಡಿದ ಅಂದ್ಕೊಂಡ್ರೆ... ಫೋನ್ ಕಟ್ ಮಾಡಿದೆ...)

Comments !