ARAVINDA VISHWANATHAPURA

ಗಣೇಶಯ್ಯನವರ ಪುಸ್ತಕಗಳು

Oct 16, 2012
1 minute read.
ಕನ್ನಡ ಪುಸ್ತಕ ಪರಿಚಯ kannadablog
ನಾನು ತಂದ ಪುಸ್ತಕಗಳು

ಹಿಂಗೇ ಮೊನ್ನೆ ಶನಿವಾರ ಲ್ಯಾಪ್ ಟಾಪ್ ಎಲ್ಲ ಬದಿಗಿಟ್ಟು ಏನಾದ್ರು ಮಾಡೋಣ ಅಂತ ಯೋಚಿಸಿರ್ಬೇಕಾದ್ರೆ ಅರ್ಜುನ್ ಭಟ್ ಫೋನ್ ಮಾಡಿದ್ರು ಬರ್ತೀಯೇನೋ English Vinglish ಮೂವಿಗೆ ಹೋಗಣ ಅಂತ. ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ ಅಂತ ಎದ್ದು ರೆಡಿಯಾಗಿ ಹೊರಟೆ. ಮೂವಿ ಸೂಪರ್ ಆಗಿತ್ತು, ಅದನ್ನ ಮುಗಿಸಿ ಗಾಂಧಿ ಬಜಾರ್ ಅಲ್ಲಿ ಸುತ್ತಾಡ್ತಿದ್ದಾಗ ಅಂಕಿತ ಬುಕ್ ಹೌಸ್ ಗೆ ಹೋಗಣ ಅಂತ ಹೊರಟ್ವಿ. ಯಾವ್ದಾದ್ರೂ ಬುಕ್ ಸಜೆಸ್ಟ್ ಮಾಡ್ತೀರಾ ಅಂತ ಅರ್ಜುನ್ ನ ಕೇಳಿದ್ದಕ್ಕೆ ಗಣೇಶಯ್ಯನವರ ಪುಸ್ತಕಗಳು ಓದಿದ್ಯಾ ತುಂಬಾ ಚೆನಾಗಿದ್ಯಂತೆ ಅಂದ್ರು. ಸರಿ ಅಲ್ಲೇ ಹೋಗಿ ನೋಡೋಣ ಅಂತ ಹೋಗಿ ಗಣೇಶಯ್ಯನವರ ಎರಡು ಪುಸ್ತಕ ಆರಿಸಿಕೊಂಡೆ. (ಪದ್ಮಪಾಣಿ, ನೇಹಲ).

ಬಿಲ್ ಮಾಡಿಸ್ತಾ ಇದ್ದಾಗ ಅಂಕಿತದವರು ಬರೀ ಕತೆಗಳ ಪುಸ್ತಕಗಳನ್ನು ತಗೊಂಡಿದೀರಾ ಗಣೇಶಯ್ಯನವರ ಕಾದಂಬರಿಗಳನ್ನು ಓದಾಯ್ತಾ ಅಂದ್ರು, ಅಯ್ಯೋ ಇಲ್ಲ ಈಗಿತ್ಲಾಗೆ ಓದೋದೇ ಕಮ್ಮಿ ಆಗ್ಬಿಟ್ಟಿದೆ. ಕತೆಗಳಾದ್ರೆ ಅವಾಗವಾಗ ಓದಿ ಮುಗಿಸ್ಬೋದು ಅಂದೆ. ನಾನು ತಗೊಂಡ ಎರಡು ಪುಸ್ತಕ ನೋಡಿ "ಸಿಗೀರಿಯ" ಓದಿದೀರಾ ಅಂದ್ರು. ಇಲ್ಲ ಅಂದೆ, ಅವ್ರು ಸಜೆಸ್ಟ್ ಮಾಡಿದ್ಮೇಲೆ ಬಿಡಕ್ಕೆ ಮನಸಾಗ್ಲಿಲ್ಲ. ಅದನ್ನೂ ತಗೊಂಡೆ. ಒಟ್ಟು ಮೂರು ಪುಸ್ತಕ ತಗೊಂಡು ಬಂದೆ.

"ಸಿಗೀರಿಯ" ಮೊದಲಿಗೆ ಶುರು ಮಾಡಿ ಭಾನುವಾರವೇ ಓದಿ ಮುಗಿಸಿದೆ. ಇದುವರೆಗೆ ಓದಿದ ಶೈಲಿಗಳಿಗಿಂತ ಬಹಳ ವಿಭಿನ್ನವೆನಿಸಿತು.

ಒಂದು ಪ್ರವಾಸಿ ತಾಣಕ್ಕೆ ಹೋದಾಗ ಆ ಜಾಗದ ಬಗ್ಗೆ ಬಹಳಷ್ಟು ಜನಪದ ಕತೆಗಳಿರುತ್ತವೆ, ಕೆಲವೊಂದಷ್ಟು ಕತೆಗಳು ಒಬ್ಬರಿಂದೊಬ್ಬರಿಗೆ ಹೇಳಿದಾಗ/ಕೇಳಿದಾಗ ಆ ಕತೆಗಳಲ್ಲಿ ಬಹಳಷ್ಟು ಮಾರ್ಪಾಡು ಆಗಿರುತ್ತದೆ. ಎಷ್ಟೇ scientific ಆಗಿ ಯೋಚಿಸಿದ್ರೂ ಅದ್ಯಾಕೆ ಹಂಗೆ, ನಿಜ್ವಾಗ್ಲೂ ಹಂಗಾಗಿತ್ತಾ ಅನ್ನೋ ಪ್ರಶ್ನೆಗಳಿಗೆ ಉತ್ತರನೇ ಸಿಗೋಲ್ಲ. ಗಣೇಶಯ್ಯನವರ ಕತೆಗಳು ಆ ತರಹದ ಜನಪದ ಕತೆಗಳಿಗೆ ವಿಜ್ಞಾನದ, ಸಂಶೋದನೆಯ ಟಚ್ ಕೊಟ್ಟು, ಈ ತರಹವೂ ಯೋಚಿಸಬಹುದು ಎಂದು ಅನಿಸುವಂತೆ ಮಾಡುತ್ತದೆ. ಉದಾಹರಣೆಗೆ "ಪದ್ಮಪಾಣಿ" ಪುಸ್ತಕದಲ್ಲಿ ತಲಕಾಡಿನ ಬಗ್ಗೆ ನಾವು ಇದುವರೆಗೆ ಕೇಳಿದ ಕತೆಯಂತೆ ನಡೆದಿರಲು ಸಾದ್ಯವೇ ಇಲ್ಲ ಅನ್ನಿಸುವಷ್ಟು ಚೆನ್ನಾಗಿ ಕತೆ ನಿರೂಪಿಸಿದ್ದಾರೆ. ಈಗಿರುವಂತೆ ಕತೆ ಹಬ್ಬಿದ್ದಾದರೂ ಹೇಗೆ ಎನ್ನುವುದಕ್ಕೂ ಅವರ ಲೇಖನದಲ್ಲಿ ಉತ್ತರವಿದೆ. ಒಂದೊಂದು ಕತೆ ಓದಿದಾಗಲೂ ನಮ್ಮ ಊರಿನ ಜಾನಪದ ಕತೆಗಳಲ್ಲೂ ಹೀಗೇ ಏನಾದರೂ ಆಗಿರಬಹುದಾ? ಅಥವಾ ಮೂಡನಂಬಿಕೆಗಳ ಹಿಂದೆಯೂ ಇಂತವೇ ಕತೆಗಳು ಇರಬಹುದಾ ಎಂದು ಯೋಚಿಸುವಂತೆ ಮಾಡುತ್ತವೆ.

ನಿಮ್ಮಲ್ಲಿ ಕುತೂಹಲ ಮೂಡಿಸಲು ತಲಕಾಡಿನ ಕತೆಯ ಒಂದು ಇಣುಕುನೋಟ ಸೇರಿಸಿದ್ದೇನೆ. :)

ಇಣುಕು ನೋಟ

About Aravinda Vishwanathapura

Co-Founder & CTO at Kadalu Technologies, Creator of Sanka, Creator of Chitra, GlusterFS core team member, Maintainer of Kadalu Storage
Contact: Linkedin | Twitter | Facebook | Github | mail@aravindavk.in