ಬುಕ್‍ಮಾರ್ಕ್

ಮೊನ್ನೆ ಒಬ್ಬ ಫ್ರೆಂಡ್ ಬಂದಿದ್ದ ಮನೆಗೆ, ನನ್ನ ಪುಸ್ತಕಗಳ ಸಂಗ್ರಹ ನೋಡಿ ಹೇಳಿದ..

"ಸೂಪರ್ collection ಕಣೋ, ಸುಮಾರು ಬುಕ್ಕು ಇಟ್ಟಿದೀಯಾ.. ಎಲ್ಲಾ ಓದ್ತೀಯಾ?"

"ಅವಾಗವಾಗ ಟೈಮ್ ಸಿಕ್ಕಾಗ ಓದ್ತೀನಿ, ಇನ್ನೂ ಸುಮಾರು ಬಾಕಿ ಇದೆ ಓದಕ್ಕೆ.. ಇವಾಗ ಈ ಬುಕ್ಕು ಓದ್ತಿದೀನಿ ನೋಡು" ಅಂತ ಆ ಬುಕ್ ಕೊಟ್ಟೆ ಅವ್ನಿಗೆ ನೋಡಕ್ಕೆ

ಅವನು ಹಾಗೇ ನೋಡುತ್ತಾ ಹಿನ್ನುಡಿ ಓದಿದ, ಆಮೇಲೆ ಹಾಗೇ ಮಾತನಾಡುತ್ತಾ ಪುಟಗಳನ್ನು ಮೊದಲಿಂದ ಕೊನೇಗೆ ಕೊನೆಯಿಂದ ಮೊದಲಿಗೆ ತಿರುಗಿಸೋಕೆ ಶುರು ಮಾಡಿದ. ನಾನು ಸಲ್ಪ tension ಇಂದ ಅವನು ಹಾಗೆ ಮಾಡೋದನ್ನೇ ನೋಡುತ್ತಾ ಇದ್ದೆ. ಸಲ್ಪ ಹೊತ್ತು ಹಾಗೇ ಮಾಡ್ತಾ ಮಾಡ್ತಾ ಅದ್ರಲ್ಲಿದ್ದ ಬುಕ್‍ಮಾರ್ಕ್ ಕಾಣಿಸಿತು, ಅದನ್ನು ಕೈಯಲ್ಲಿ ಎತ್ತಿ ಹಿಡ್ಕೊಂಡು ನೋಡ್ತಾ ಹೇಳಿದ..

"ಈ ಅಂಕಿತದವ್ರು ಬುಕ್‍ಮಾರ್ಕ್ ಚೆನಾಗಿ ಮಾಡ್ತಾರೆ ಅಲ್ವಾ?"

ಬುಕ್‍ಮಾರ್ಕ್ ಅನ್ನು ಕೈಯಲ್ಲಿ ಹಿಡ್ಕೊಂಡು ಆಟ ಆಡ್ತಾ ಮಾತಾಡಿದಷ್ಟೂ ನಂಗೆ ಯೋಚ್ನೆ ಜಾಸ್ತಿ ಆಗ್ತಾ ಇತ್ತು.. ಬೆಕ್ಕಿಗೆ ಆಟ ಇಲಿಗೆ ಪ್ರಾಣಸಂಕಟ ಅನ್ನೋತರಹ.

ನನ್ನ ಮುಖ ನೋಡಿ ಅವ್ನಿಗೆ ಏನನ್ನಿಸ್ತೋ ಏನೋ..

"ಅಯ್ಯೋ ಅದ್ಯಾಕೆ ಬುಕ್ ನ ತಿಂದು ಹಾಕಿಬಿಟ್ಟೆ ಅನ್ನೋತರ ಚಿಂತೆ ಮಾಡ್ತಿದೀಯಾ, ನಿನ್ನ ಬುಕ್ ನಂಗೇನ್ ಬೇಡ ತಗೋ.."

"ಹೇ..ಹಂಗೇನಿಲ್ವೋ ಮಾರಾಯಾ, ನೀನು ಆ ಬುಕ್‍ಮಾರ್ಕ್ ನ ಬೀಳಿಸಿ ಬಿಟ್ರೆ ನಾನು ಮತ್ತೆ ಮೊದ್ಲಿಂದ ಓದ್ಬೇಕಲ್ಲ ಅಂತ ಯೋಚಿಸ್ತಿದ್ದೆ.."

Comments !