ಬೇಸ್ತು ಬಿದ್ದ ಪ್ರಸಂಗ

ಇವತ್ತು ಬೆಳಗ್ಗೆ ಬೈಕ್ ಪಂಚರ್ ಆಗಿತ್ತು, ಸರಿ ಮಾಡಿಸಲು ಹೋಗಿದ್ದೆ. ಅಲ್ಲಿ ಅವರು ರಿಪೇರಿ ಮಾಡುತ್ತಿರಬೇಕಾದರೆ ನೋಡುತ್ತಾ ನಿಂತಿದ್ದೆ. ಎಲ್ಲಾ ಮುಗೀತು ಅನ್ನೋ ಅಷ್ಟರಲ್ಲಿ "ಇಲ್ಲಿ ಬನ್ನಿ ಕೂತ್ಕೊಳಿ ಸಾರ್" ಅಂತ ಹೇಳಿದ್ರು. ಇಷ್ಟೊತ್ತೂ ಏನೂ ಹೇಳದಿದ್ದವರು ಈಗ ಕೂತ್ಕೊಳಕ್ಕೆ ಹೇಳ್ತಿದಾರಲ್ಲಾ ಅಂತ ಅಂದುಕೊಂಡು, "ಇರಲಿ ಪರವಾಗಿಲ್ಲ" ಅಂದೆ. ಅದಕ್ಕೆ ಅವರು "ಅಯ್ಯೋ ಬನ್ರೀ ಇಲ್ಲಿ ಇದನ್ನ ಸಲ್ಪ ಹಿಡ್ಕೊಂಡು ಕೂತ್ಕಳಿ, ಇದಕ್ಕೆ ಚುಚ್ಚಿದ ಮೊಳೆ ತೆಗೀಬೇಕು " ಅಂದರು. :)

Comments !